
ಹಿಮಾಲಯ ಪರ್ವತಾರೋಹಣ ಯಾತ್ರೆಗೆ ಚಾಲನೆ
ಬೆಂಗಳೂರು: ದಾದಿಯರ ಹಿಮಾಲಯ ಪರ್ವತಾರೋಹಣ ಯಾತ್ರೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ Tiger Adventure Foundation ಸಂಸ್ಥೆಯ ಸಹಭಾಗಿತ್ವದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂದೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಾಹಸ ಯಾತ್ರೆಯು ಮೇ 5 ರಿಂದ ಆರಂಭವಾಗಿ ಮೇ 18, 2023ರಂದು ಮುಕ್ತಾಯಗೊಳ್ಳಲಿದೆ. ಈ ತಂಡವು ಮೇ 12, 2023ರಂದು ಹಿಮಾಲಯ ಪರ್ವತದ ಶಿಖರದ ತುದಿಯನ್ನು ತಲುಪಲಿದ್ದು, ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸಲಿದ್ದಾರೆ.
Tiger Adventure Foundation ಸಂಸ್ಥೆಯು 2013ರಲ್ಲಿ ಸ್ಥಾಪಿಸಲಾಗಿದ್ದು, ಯುವಕರಲ್ಲಿ ಸಾಹಸ ಕ್ರೀಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುತ್ತದೆ. Lady with Lamp ಎಂದು ಪ್ರಖ್ಯಾತಿಗೊಂಡಿದ್ದ ಫ್ಲಾರೆನ್ಸ್ ನೈಟಿಂಗ್ ಗೇಲ್ ಇವರ 203ನೇ ಜನ್ಮ ದಿನಾಚರಣೆಯ ಹಾಗೂ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ sora Tiger Adventure Foundation O Vision 2023 FONDES. ಮೂಲಕ ಕೋವಿಡ್ ಸಮಯದಲ್ಲಿ ಮಹಿಳಾ ದಾದಿಯರ ಸಮುದಾಯವು ರೋಗಿಗಳಿಗೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಲು, ಕೃತಜ್ಞತಾ ಪೂರ್ವಕವಾಗಿ ಸಾಹಸ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ಯಾತ್ರೆಯು ದಾದಿಯರಿಗೆ ಗೌರವ ಸಲ್ಲಿಸಲು ಭಾರತದ ಸಾಹಸ ಇತಿಹಾಸದಲ್ಲಿ ಮೊಟ್ಟೆ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದೆ.