
ಹಿರಿಯಡ್ಕ : ಇಲಿ ಪಾಶಾಣ ಮಿಶ್ರಿತ ಪಪ್ಪಾಯಿ ತಿಂದು ಮಹಿಳೆ ಮೃತ್ಯು
ಉಡುಪಿ: ಇಲಿಗಳನ್ನು ಕೊಲ್ಲಲೆಂದು ವಿಷ ಬೆರೆಸಿ ಇಟ್ಟಿದ್ದ ಪಪ್ಪಾಯಿಯನ್ನು ಅರಿಯದೆ ತಿಂದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಕುದಿ ಗ್ರಾಮದ ದೇವರಗುಂಡ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಮೃತ ಮಹಿಳೆಯನ್ನು ದೇವರಗುಂಡ ನಿವಾಸಿ ವಾಮನ ನಾಯ್ಕ ಎಂಬವರ ಪತ್ನಿ ಶ್ರೀಮತಿ(43) ಎಂದು ಗುರುತಿಸಲಾಗಿದೆ.
ವಿಪರೀತ ಇಲಿಗಳ ಕಾಟ ಇರುವುದರಿಂದ ಅವುಗಳನ್ನು ಕೊಲ್ಲಲೆಂದು ಅ.19ರಂದು ಮನೆಯಲ್ಲಿ ಪಪ್ಪಾಯಿ ಹಣ್ಣಿನಲ್ಲಿ ವಿಷ ಬೆರೆಸಿ ಇಡಲಾಗಿತ್ತು. ಇದರ ಅರಿವಿಲ್ಲದೆ ತನ್ನ ತಾಯಿ ಅಂದು ಮಧ್ಯಾಹ್ನ ಈ ಪಪ್ಪಾಯಿ ಹಣ್ಣಿನ ತುಂಡುಗಳನ್ನು ತಿಂದಿದ್ದಾರೆ. ಇದರಿಂದ ಮರುದಿನ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ಚಿಕಿತ್ಸೆಗೆ ಸ್ಪಂದಿಸದೆ ಅ.24ರಂದು ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.