ಹಿರಿಯಡ್ಕ: ಮಹಿಳೆ ಮೇಲೆ ಗ್ರಾಮ ಪಂಚಾಯತ್‌ ಸದಸ್ಯನಿಂದ ಹಲ್ಲೆ ಆರೋಪ – ಪ್ರತ್ಯೇಕ ದೂರು ದಾಖಲು

Spread the love

ಹಿರಿಯಡ್ಕ: ಮಹಿಳೆ ಮೇಲೆ ಗ್ರಾಮ ಪಂಚಾಯತ್‌ ಸದಸ್ಯನಿಂದ ಹಲ್ಲೆ ಆರೋಪ – ಪ್ರತ್ಯೇಕ ದೂರು ದಾಖಲು

ಉಡುಪಿ: ಇಲ್ಲಿನ ಆತ್ರಾಡಿ ಗ್ರಾಮ ಪಂಚಾಯತ್‌ ಸದಸ್ಯನೋರ್ವ ಖಾಸಗಿ ವ್ಯಕ್ತಿಯವರ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಸಂಜೆ ನಡೆದಿದ್ದು ಘಟನೆಯ ಕುರಿತು ಎರಡು ಪ್ರತ್ಯೇಕ ದೂರುಗಳು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪರೀಕದ ನಿವಾಸಿ ಆರತಿಯವರ ಇವರ ಪಟ್ಟಾ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್‌ ಮನೆಯವರ ವಿರೋಧದ ನಡುವೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದರು. ಸ್ಥಳದಲ್ಲಿದ್ದ ಪಂಚಾಯತ್‌ ಸದಸ್ಯ ರತ್ನಾಕರ್‌ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯಡಕ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಮಾತ್ರವಲ್ಲದೆ ಇವರ ನಡುವೆ ನಡೆದ ವಾಗ್ವಾದದಲ್ಲಿ ರತ್ನಾಕರ್‌ ಶೆಟ್ಟಿ ಅವರು ಆರತಿಯವರನ್ನು ತಳ್ಳಿದ ಪರಿಣಾಮ ತಲೆಗೆ ಗಂಭೀರ ಗಾಯವಾಗಿತ್ತು. ತಡೆಯಲು ಬಂದ ಆರತಿ ಅವರ ಮಗಳ ಮೇಲೆ ಕೂಡ ಹಲ್ಲೆ ನಡೆ‌ಸಿದ್ದಾರೆ. ಆರತಿ ಅವರು ಉಡುಪಿ ಜಿಲ್ಲಾ ಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಚಂದ್ರಹಾಸ ಶೆಟ್ಟಿಯವರು ಕೂಡ ಆರತಿಯವರ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು ಚಂದ್ರಹಾಸ ಶೆಟ್ಟಿ ಹಾಗೂ ನೆರೆಮನೆಯವರು ತಮ್ಮ ಮನೆಯ ಮುಂಭಾಗದಲ್ಲಿ ರಸ್ತೆಯನ್ನು ನಿರ್ಮಾಣ ಮಾಡುವ ಸಲುವಾಗಿ ಗ್ರಾಮ ಪಂಚಾಯಿಗೆ ಅರ್ಜಿಯನ್ನು ಸಲ್ಲಿಸಿ ರಸ್ತೆಗೆ ಜಾಗವನ್ನು ನೀಡುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡಿದ್ದು . ಸದರಿ ರಸ್ತೆಗೆ ಗ್ರಾಮ ಪಂಚಾಯಿತಿಯಿಂದ ಅನುದಾನ ಮಂಜೂರಾಗಿರುತ್ತದೆ.

ಸೆ. 5 ರಂದು ಬೆಳಿಗ್ಗೆ, ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ನಿರ್ಮಾಣ ಕೆಲಸ ಪ್ರಾರಂಭವಾಗಿದ್ದುಸಂಜೆ 4:30 ಗಂಟೆ ಸಮಯಕ್ಕೆ ಆರತಿಯು ಆಕೆಯ ಗಂಡ ಹಾಗೂ ತಮ್ಮ ಆಶೋಕ್ ಜೊತೆಗೆ ಸ್ಥಳಕ್ಕೆ ಬಂದುಚಂದ್ರಹಾಸ ಶೆಟ್ಟಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕರ ಜೊತೆ ಜಗಳ ಮಾಡಿ ,ಕೋಪದಿಂದ ಪಿರ್ಯಾದಿ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕರಾದ ರತ್ನಾಕರ ಶೆಟ್ಟಿರವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎರಡು ಕಡೆಯವರ ಪ್ರಕರಣವನ್ನು ದಾಖಲಿಸಿಕೊಂಡಿರುವ ಹಿರಿಯಡಕ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


Spread the love