ಹಿರಿಯ ಕಾಂಗ್ರೆಸಿಗ ಮಲ್ಪೆ ಭಗವಾನ್ ದಾಸ್ ನಿಧನ

Spread the love

ಹಿರಿಯ ಕಾಂಗ್ರೆಸಿಗ ಮಲ್ಪೆ ಭಗವಾನ್ ದಾಸ್ ನಿಧನ

ಉಡುಪಿ: ಹಿರಿಯ ಕಾಂಗ್ರೆಸಿಗ ಮಾಜಿ ಸಚಿವರಾದ ಮನೋರಮಾ ಮದ್ವರಾಜ್ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರ ನಿಕಟ ಸಹವರ್ತಿ, ಉಡುಪಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಲ್ಪೆ ಭಗವಾನದಾಸ್ ನಿಧನರಾದರು.

1949ರಲ್ಲಿ ಮಲ್ಪೆಯಲ್ಲಿ ಜನಿಸಿದ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮ್ಮ ಸೇವಾವಧಿಯಲ್ಲಿ ಬ್ಯಾಂಕ್ ಯೂನಿಯನ್‌ನ ನಾಯಕರಾಗಿ, ಬ್ಯಾಂಕ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಿಂಡಿಕೇಟ್ ಬ್ಯಾಂಕ್, ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ನೇತೃತ್ವ ವಹಿಸಿದ್ದ ಅವರು ಕೊನೆಯವರೆಗೂ ಸಾಮಾಜಿಕ ಕಳಕಳಿಗಾಗಿ ಹೋರಾಟ ನಡೆಸಿದರು.

ಬ್ರಹ್ಮಚಾರಿಯಾಗಿ ಉಳಿದ ಅವರು ತಾಯಿ ಸಹೋದರ ಸಹೋದರಿಯರು, ಹಿತೈಷಿಗಳೊಂದಿಗೆ ಜೀವಿಸುತ್ತಿದ್ದರು.


Spread the love