ಹುಕ್ಕಾ ಬಾರ್ ಗೆ ಪೊಲೀಸರ ದಾಳಿ – ಇಬ್ಬರ ಬಂಧನ

Spread the love

ಹುಕ್ಕಾ ಬಾರ್ ಗೆ ಪೊಲೀಸರ ದಾಳಿ – ಇಬ್ಬರ ಬಂಧನ

ಮಂಗಳೂರು: ಹುಕ್ಕಾ ಬಾರೊಂದಕ್ಕೆ ಪಾಂಡೇಶ್ವರ ಪೊಲೀಸರು ಬುಧವಾರ ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದ್ದಾರೆ.

ಮಾಹಿತಿಗಳ ಪ್ರಕಾರ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಕಂಕನಾಡಿ – ಫಳ್ನೀರ್ ರಸ್ತೆಯಲ್ಲಿನ ಕ್ಲೌಡ್ ಶೀಶಾ ಕೆಫೆಯ ಹಿಂದಿನ ಬಾಗಿಲನ್ನು ತೆರೆದಿಟ್ಟು ಗ್ರಾಹಕರಿಗೆ ಹುಕ್ಕಾ ಎಳೆಯಲು ಅವಕಾಶ ಮಾಡಿಕೊಡಲಾಗಿತ್ತು ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ದಾಳಿಯ ವೇಳೆ ಹುಕ್ಕಾ ಬಾರಿನಲ್ಲಿ 17 ಮಂದಿ ಹುಕ್ಕಾ ಸೇವನೆಯಲ್ಲಿ ತೊಡಗಿದ್ದು ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಹುಕ್ಕಾ ಸೇವೆನೆಗೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love