
ಹುಟ್ಟುಹಬ್ಬ ಬೇಡವೆಂದಿದಕ್ಕೆ ಯುವಕ ಆತ್ಮಹತ್ಯೆ
ಕೆ.ಆರ್.ಪೇಟೆ: ಕೋರೋನಾ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದು ಆರೋಗ್ಯ ದೃಷ್ಠಿಯಿಂದ ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಕ್ಕೆ ಯುವಕನೊಬ್ಬ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ.
ವಡ್ಡರಹಳ್ಳಿ ಗ್ರಾಮದ ವಿ.ಎಸ್.ಅನಂತಕುಮಾರ್(23) ಎಂಬಾತ ಸ್ನೇಹಿತರೊಂದಿಗೆ ಸೇರಿ ಹುಟ್ಟು ಹಬ್ಬ ಆಚರಣೆಗೆ ಹೋಗಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಅವರ ತಾಯಿ ಈಗ ಕೊರೊನಾ ಸಂದರ್ಭದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದು. ಹುಟ್ಟು ಹಬ್ಬವನ್ನು ಗುಂಪುಗೂಡಿ ಸೇರಿ ಆಚರಣೆ ಮಾಡುವುದು ಸರಿಯಲ್ಲ ಮುಂದೆ ಎಲ್ಲಿಗೂ ಹೋಗಬೇಡ ಎಂದು ತಾಯಿ ಬುದ್ದಿವಾದ ಹೇಳಿ ಬೈಯ್ದರು ಎಂದು ಬೇಸರಗೊಂಡು ತಮ್ಮ ಗ್ರಾಮದ ಪಕ್ಕದ ಗ್ರಾಮದ ಕುಪ್ಪಳ್ಳಿ ಗ್ರಾಮದ ಬಳಿ ಹರಿಯುವ ಮಂದಗೆರೆ ಎಡದಂಡೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಅನಂತಕುಮಾರ್ ಅವರ ಪೋಷಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ವಾರಸುದಾರರಿಗೆ ನೀಡಿದ್ದಾರೆ.
Stupid act.