ಹುಣಸೂರಿನಲ್ಲಿ ನಾಲೆ ನೀರಿಗೆ ಬಿದ್ದು ವೃದ್ಧೆ ಸಾವು

Spread the love

ಹುಣಸೂರಿನಲ್ಲಿ ನಾಲೆ ನೀರಿಗೆ ಬಿದ್ದು ವೃದ್ಧೆ ಸಾವು

ಮೈಸೂರು: ನಾಲೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಸಂದರ್ಭ ವೃದ್ಧೆಯೊಬ್ಬರು ನೀರಿಗೆ ಬಿದ್ದು ಸಾವನ್ನಪ್ಪಿರುವ ‍ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಿರೀಕ್ಯಾತನಹಳ್ಳಿ ಗ್ರಾಮದ ಜಯಮ್ಮ ಎಂಬ ವೃದ್ಧೆಯೇ ನೀರಿಗೆ ಬಿದ್ದು ಸಾವನ್ನಪ್ಪಿದವರು. ಇವರು ಹಬ್ಬದ ಹಿನ್ನಲೆಯನ್ನು ಬಟ್ಟೆಯನ್ನು ನಾಲೆಗೆ ಕೊಂಡೊಯ್ದು ಅಲ್ಲಿ ಒಗೆದು ತರಲು ಹೋಗಿದ್ದರು. ನಾಲೆಯ ಬಳಿ ಬೇರೆ ಯಾರೂ ಇರಲಿಲ್ಲ. ಒಂದಷ್ಟು ಬಟ್ಟೆ ಒಗೆದ ಬಳಿಕ ತಲೆ ಸುತ್ತು ಕಾಣಿಸಿಕೊಂಡು ಸುಧಾರಿಸಿಕೊಳ್ಳಲಾಗದೆ ನಾಲೆಯ ನೀರಿಗೆ ಬಿದ್ದಿದ್ದು, ಪರಿಣಾಮ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮನೆಯವರು ಬಟ್ಟೆ ಒಗೆದು ಬರಬಹುದೆಂಬ ಸುಮ್ಮನಾಗಿದ್ದಾರೆ. ಇತ್ತ ನಾಲೆಯಲ್ಲಿ ಬಟ್ಟೆ ತೇಲುತ್ತಿರುವುದನ್ನು ನೋಡಿದ ಜನ ಏನಾಗಿದೆ ಎಂದು ಇಣುಕಿ ನೋಡಿದ್ದಾರೆ. ಈ ವೇಳೆ ಜಯಮ್ಮ ಶವವಾಗಿ ನೀರಿನಲ್ಲಿ ಬಿದ್ದಿರುವುದು ಕಾಣಿಸಿದೆ. ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದು, ಶವವನ್ನು ನೀರಿನಿಂದ ಮೇಲೆತ್ತಲಾಯಿತು. ವಿಷಯ ತಿಳಿಯುತ್ತಿದ್ದಂತೆಯೇ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದರು. ಮೃತ ಜಯಮ್ಮ ಪತಿ ಹಾಗೂ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


Spread the love