ಹುಷಾರ್! ಈ ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ!

Spread the love

ಹುಷಾರ್! ಈ ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ!

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿ ಮತ್ತು ಕಾಂತಿ ವರ್ಧಕ ಗಳು ಗುಣಮಟ್ಟವಿಲ್ಲದ ಕಾರಣ ಮಾರಾಟ ಮಾಡುವುದನ್ನು ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ.

ಸಿಪ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ. 500 ಎಂ.ಜಿ, ಫೆವಿಪಿರವಿರ್ ಟ್ಯಾಬ್ಲೆಟ್ಸ್ 400ಎಂಜಿ (ಫೆವಿಮ್ಯಾಕ್ಸ್-400), ಫೆವಿಮ್ಯಾಕ್ಸ್-400 ಟ್ಯಾಬ್ಲೆಟ್ಸ್ (ಫೆವಿಪಿರವಿರ್ ಟ್ಯಾಬ್ಲೆಟ್ಸ್ 400ಎಂಜಿ), ಲಿಕ್ವಿಡ್ ಹ್ಯಾಂಡ್ ಡಿಸಿನ್‍ಫೆಕ್ಟಂಟ್, ಫೆವಿಪಿರವಿರ್ ಟ್ಯಾಬ್ಲೆಟ್ಸ್ (ಫೆವಿಮ್ಯಾಕ್ಸ್-400), ಡೈಕ್ಲೋಮೈನ್ ಹೈಡ್ರೋಕ್ಲೋರೈಡ್ ಇನ್‍ಜೆಕ್ಷನ್ ಐಪಿ(ವೆಟ್), ಫೆವಿಮೆಡ್-400ಟ್ಯಾಬ್ಲೆಟ್ಸ್ (ಫೆವಿಪಿರವಿರ್ ಟ್ಯಾಬ್ಲೆಟ್ಸ್-400 ಎಂ.ಜಿ) ಈ ಔಷಧಿಗಳು, ಕಾಂತಿವರ್ಧಕಗಳನ್ನು ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರು ಗುಣಮಟ್ಟವಲ್ಲದ ಔಷಧಿಗಳಾಗಿದ್ದು, ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆಯೂ ಅಲ್ಲದೆ ಸಾರ್ವಜನಿಕರು ಈ ಔಷಧ, ಕಾಂತಿವರ್ಧಕಗಳನ್ನು ಉಪಯೋಗಿಸದಂತೆ ಸೂಚಿಸಲಾಗಿದೆ.


Spread the love