ಹೂಡೆ: ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ – ವಿದ್ಯಾರ್ಥಿಗಳಿಂದ ಜಾಥಾ

Spread the love

ಹೂಡೆ: ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ – ವಿದ್ಯಾರ್ಥಿಗಳಿಂದ ಜಾಥಾ

ಹೂಡೆ: ಹದಿ ಹರೆಯದ ಯುವಕರಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನದ ವಿರುದ್ಧ ಜನ ಜಾಗೃತಿ ಮೂಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ, ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಎಸ್.ಐ.ಓ ಹೂಡೆ ವತಿಯಿಂದ ಜನವರಿ 10 ರಿಂದ ಫೆಬ್ರವರಿ 10 ರವರೆಗೆ ನಡೆಯಲಿರುವ “ಮಾದಕ ವ್ಯಸನದ ವಿರುದ್ಧದ” ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.

ಡಾ. ಶಹನಾವಝ್ ಅವರು ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಂದು ಯುವಜನರಲ್ಲಿ ಈ ಪಿಡುಗು ವ್ಯಾಪಕವಾಗುತ್ತಿದ್ದು ಇದರಿಂದಾಗಿ ಅವರ ಜೀವನ ನರಕ ಸದೃಶವಾಗಿದೆ. ಜನರು ಈ ಕುರಿತು ಜಾಗೃತರಾಗಬೇಕು. ಮಕ್ಕಳನ್ನು ಧನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಕುರಿತು ಪ್ರಯತ್ನಿಸಬೇಕು. ತಮ್ಮ ಮಕ್ಕಳ ಮೇಲೆ ನಿಗಾ ವಹಿಸಿ ಅವರು ಯಾವುದೇ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ನಂತರ  ವಿದ್ಯಾರ್ಥಿಗಳಿಗೆ ಜನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಈ ಭಿತ್ತಿ ಪತ್ರಗಳ ಮುಖೇನಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ಅಭಿಯಾನ ಸಂಚಾಲಕರಾದ ಇಸ್ಮಾಯಿಲ್ ಕಿದೆವರ್, ಸಾಲಿಹಾತ್ ಸಮೂಹ ಸಂಸ್ಥೆಯ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಅಬ್ದುಲ್ ರಝಾಕ್ ನಕ್ವಾ, ಮೌ ಅಝ್ಘರ್ ಖಾಸ್ಮಿ, ಎಸ್.ಐ.ಓ ಹೂಡೆಯ ವಸೀಮ್, ಸಾಲಿಡಾರಿಟಿ ಹೂಡೆಯ ಅಧ್ಯಕ್ಷರಾದ ಜಾಬೀರ್ ಕಿದೆವರ್ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here