ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ: ಡಾ. ಸಿ.ಎನ್. ಮಂಜುನಾಥ್

Spread the love

ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ: ಡಾ. ಸಿ.ಎನ್. ಮಂಜುನಾಥ್

ಮೈಸೂರು: ಹೃದಯರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಶೇ.35ರಷ್ಟು ಸಾವುಗಳು ಹೃದಯ ಸಂಬಂಧಿಕಾಯಿಲೆಯಿಂದ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಮೈಸೂರು ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು. ಇದೇ ಸಂದರ್ಭದಲ್ಲಿ ಕೆಲವು ರೋಗಿಗಳು ಚಿಕಿತ್ಸೆಗೆ ರಿಯಾಯಿತಿ ಕೇಳಿದರು ಅದಕ್ಕೆ ಸ್ಪಂದಿಸಿದ ಡಾ. ಸಿ.ಎನ್. ಮಂಜುನಾಥ್‌ರವರು ನಿಂತಲ್ಲೆ ಆದೇಶ ನೀಡಿದರು.

ಆಸ್ಪತ್ರೆಯ ಎಲ್ಲಾ ವಿಭಾಗಗಳು ಸಮರ್ಪಕವಾಗಿ ಕೆಲಸ ಮಾಡುತಿದ್ದು, ಪ್ರತಿದಿನ 700ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದಾರೆ. ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರು ಎಚ್ಚರಿಕೆ ವಹಿಸಬೇಕು. ಹೆಚ್ಚಾಗಿ ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಇರುವವರು ಹೃದಯ ಸಂಬಂಧಿ ಕಾಯಿಲೆಯನ್ನು ನಿರ್ಲಕ್ಷಿಸಬಾರದು. ಬದಲಾದ ಜೀವನ ಶೈಲಿಯಿಂದ ಯುವಕರಲ್ಲಿ ಹೆಚ್ಚಾಗಿ ಹೃದಯಘಾತವಾಗುತ್ತಿದ್ದು, ಯುವಕರು ಒತ್ತಡ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಗುಣಮಟ್ಟದ ಆಹಾರವನ್ನು ಸೇವಿಸಬೇಕು. ಪ್ರತಿದಿನ 45 ನಿಮಿಷ ವ್ಯಾಯಮ ಮಾಡಬೇಕು.35 ವರ್ಷದಾಟಿದ ಗಂಡಸರು, 45 ವರ್ಷದಾಟಿದ ಹೆಂಗಸರು ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಡಾ. ಹರ್ಷಬಸಪ್ಪ, ಡಾ.ಸಂತೋಷ್, ಡಾ.ರಾಜೀತ್, ಡಾ. ದಿನೇಶ್, ಡಾ. ಹೇಮಾರವೀಶ್, ಡಾ.ಜಯಪ್ರಕಾಶ್, ಡಾ. ಭಾರತಿ, ಡಾ.ವೀಣಾನಂಜಪ್ಪ, ಡಾ. ರಶ್ಮಿ, ಡಾ. ಶೀತಲ್, ಡಾ. ನವೀಣ್, ಡಾ. ಶ್ರೀನಿದಿ ಹೆಗ್ಗಡೆ, ಡಾ. ಹರ್ಷ, ಡಾ. ಅಶ್ವಿನಿ, ಡಾ. ದೇವರಾಜ್, ಸೈಂಟಿಫಿಕ್‌ ಆಫಿಸರ್ ಪದ್ಮ, ಆರ್.ಎಂ.ಓ. ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿ.ಆರ್.ಓ.ವಾಣಿಮೋಹನ್, ಚಂಪಕಮಾಲ, ಸೈಯದ್, ಶಂಕರ್ ಹಾಜರಿದ್ದರು.


Spread the love

1 Comment

  1. Yes, let’s not talk about the elephant in the room, which is the covid vaccines. Let’s pretend that vaccine scam never happened.

Comments are closed.