ಹೆಚ್‌ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ದಕ ಜಿಲ್ಲಾ ಯುವ ಜನತಾದಳದಿಂದ ಭಗಿನಿ ಅನಾಥಾಶ್ರಮದ ಮಕ್ಕಳಿಗೆ ಶಿಕ್ಷಣ ಪರಿಕರ ವಿತರಣೆ

Spread the love

ಹೆಚ್‌ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ದಕ ಜಿಲ್ಲಾ ಯುವ ಜನತಾದಳದಿಂದ ಭಗಿನಿ ಅನಾಥಾಶ್ರಮದ ಮಕ್ಕಳಿಗೆ ಶಿಕ್ಷಣ ಪರಿಕರ ವಿತರಣೆ

ಮಂಗಳೂರು:  ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬದ ಪ್ರಯುಕ್ತ ದ.ಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷರಾದ ಅಕ್ಷಿತ್‌ ಸುವರ್ಣ ಅವರ ನೇತೃತ್ವದಲ್ಲಿ ನಗರ ಭಗಿನಿ ಸಮಾಜ ಅನಾಥಾಶ್ರಮದಲ್ಲಿನ ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುಗಳ ಕೊರತೆ ಮನಗಂಡು ಶಿಕ್ಷಣ ಪರಿಕರಗಳಾದ ಬುತ್ತಿ ಹಾಗೂ ನೀರಿನ ಬಾಟಲಿಗಳನ್ನು ಗುರುವಾರ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ದ.ಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ನಮ್ಮ ಪಕ್ಷದ ನಾಯಕರಾದ ಕುಮಾರಸ್ವಾಮಿಯವರು ಸದಾ ಬಡವರ ಮೇಲೆ ವಿಶೇಷ ಕಾಳಜಿ ಹೊಂದಿದವರಾಗಿದ್ದು ಅವರ ಅಧಿಕಾರವಧಿಯಲ್ಲಿ ಬಡವರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿದ್ದರು. ಈ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಗೌರವದಿಂದ ಬದುಕಬೇಕು ಎಂಬ ಅಪೇಕ್ಷೆ ಹೊಂದಿದ್ದರು. ಅವರ ಜನ್ಮದಿನದ ಪ್ರಯುಕ್ತ ನಗರದಲ್ಲಿನ ಭಗಿನಿ ಸಮಾಜ ಅನಾಥಾಶ್ರಮದಲ್ಲಿನ ಮಕ್ಕಳಿಗೆ ಅವಶ್ಯಕತೆ ಇರುವ ವಸ್ತುಗಳ ಕೊರತೆ ಮನಗಂಡು ಶಿಕ್ಷಣ ಪರಿಕರಗಳಾದ ಬುತ್ತಿ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಿದ್ದು ಈ ಮೂಲಕ ಇಲ್ಲಿನ ಮಕ್ಕಳ ಮುಖದಲ್ಲಿ ನಗುವನ್ನು ಕಾಣುವುದರೊಂದಿಗೆ ಕುಮಾರಸ್ವಾಮಿಯವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಿದ ತೃಪ್ತಿ ಇದೆ ಎಂದರು

ದ.ಕ ಜಿಲ್ಲಾ ಯುವ ಜನತಾದಳ ಯುವ ನಾಯಕರುಗಳಾದ ಫೈಝಲ್ ಮೊಹಮ್ಮದ್, ರತೀಶ್ ಕರ್ಕೇರ, ಸತ್ತಾರ್ ಬಂದರ್, ರಾಶ್ ಬ್ಯಾರಿ,ಯಶು, ಪ್ರದೀಪ್, ಸೌರಬ್, ಜಿತೇಶ್, ಕೌಶಿಕ್, ರಿತೇಶ್, ಹಾಗು ಇತರರು ಪಾಲ್ಗೊಂಡಿದ್ದರು


Spread the love