ಹೆಚ್.ಡಿ.ಕೋಟೆ ಬಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ

Spread the love

ಹೆಚ್.ಡಿ.ಕೋಟೆ ಬಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ

ಎಚ್.ಡಿ.ಕೋಟೆ: ಕಾಡಾನೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮ ಬೂದನೂರು ಗ್ರಾಮದಲ್ಲಿ ನಡೆದಿದ್ದು ಅರಣ್ಯ ಇಲಾಖೆ ಅದನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ಅಟ್ಟಿದೆ.

ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮ ಕಾಡಂಚಿನ ಗ್ರಾಮವಾಗಿದ್ದು ಸಮೀಪದಲ್ಲಿಯೇ ಮೇಟಿಕುಪ್ಪೆ ವನ್ಯಜೀವಿ ವಲಯಕ್ಕೆ ಸೇರಿದ ಅರಣ್ಯವಿದ್ದು, ಇಲ್ಲಿಂದ ಕಾಡಾನೆಯೊಂದು ಬೂದನೂರು ಗ್ರಾಮಕ್ಕೆ ನುಗ್ಗಿದೆ. ತಕ್ಷಣದಲ್ಲಿ ಗ್ರಾಮದಲ್ಲಿ ಆತಂಕ ಶುರುವಾಗಿದೆ. ಕೆಲವರು ಅದನ್ನು ಬೆದರಿಸಿ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಮಾತ್ರ ತನ್ನ ಪಾಡಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದೆ. ಆಗ ಅದನ್ನು ಹಿಂಬಾಲಿಸಿ ಜನ ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಡಾನೆ ಮಾತ್ರ ಯಾವುದೇ ರೀತಿಯ ತೊಂದರೆ ನೀಡದೆ ಗ್ರಾಮದಲ್ಲಿ ಸಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮೇಟಿಕುಪ್ಪೆ ವನ್ಯಜೀವಿ ವಲಯದ ಆರ್‌ಎಫ್‌ಒ ನಾರಾಯಣನಾಯ್ಕ ಅವರು ಗ್ರಾಮದ ಜನರನ್ನು ಚದುರಿಸಿ ಒಂಟಿ ಸಲಗನಿಗೆ ಯಾವುದೇ ತೊಂದರೆಯಾಗದಂತೆ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಂತರ ಗಾಬರಿಗೊಂಡಿದ್ದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.


Spread the love

Leave a Reply

Please enter your comment!
Please enter your name here