
Spread the love
ಹೆಜಮಾಡಿಯಲ್ಲಿ ಸುಸಜ್ಜಿತ ಕ್ರೀಡಾಂಗಣದ ಅಗತ್ಯ ವಿದೆ – ವಿನಯ್ ಕುಮಾರ್ ಸೊರಕೆ
ಉಡುಪಿ: ಯುವ ಶಕ್ತಿ ಕ್ರೀಡಾಕೂಟದಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಯುವಶಕ್ತಿಯ ಬಳಕೆಯ ಸದ್ಭಳಕೆಯ ಅಗತ್ಯ ತೆ ಇದೆ. ಹೆಜಮಾಡಿಯಲ್ಲಿ ಬಹಳಷ್ಟು ಕ್ರೀಡಾಪಟುಗಳು ರಾಜ್ಯ ದೇಶವನ್ನು ಪ್ರತಿನಧಿಸಿದ್ದಾರೆ. ಹೀಗಾಗಿ ಹೆಜಮಾಡಿಯಲ್ಲಿ ಯುವಶಕ್ತಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದೆ ಎಂದು ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಹೆಜಮಾಡಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಆಕಸ್ಮಿಕವಾಗಿ ಭಾಗವಹಿಸಿದ ಸೊರಕೆಯವರು ಪಂದ್ಯಾಟದ ಪಂದ್ಯಶ್ರೇಷ್ಟ ಪ್ರಶಸ್ತಿ ಯನ್ನು ವಿತರಿಸಿದರು.
ರಮ್ಜಾನ್ ದಿನದಂದು ವಿವಿಧ ಮುಸ್ಲಿಂ ಮುಖಂಡರನ್ನು ಶುಭಾಶಯ ಹೇಳಿದ ಸೊರಕೆ ನಂತರ ಪಾಂಗಾಳದ ಪಾಲನ್ ಮೂಲಸ್ಥಾನ ಮತ್ತು ಶ್ರೀಯಾನ್ ಮೂಲಸ್ಥಾನ ಕ್ಕೆ ಭೇಟಿ ದೇವರ ದರ್ಶನ ಪಡೆದರು.
Spread the love