ಹೆದ್ದಾರಿಯಲ್ಲಿ ಡಿಸೇಲ್ ಸೋರಿಕೆ: ಬಿದ್ದು-ಎದ್ದು ಸಾಗಿದ ಸವಾರರು!

Spread the love

ಹೆದ್ದಾರಿಯಲ್ಲಿ ಡಿಸೇಲ್ ಸೋರಿಕೆ: ಬಿದ್ದು-ಎದ್ದು ಸಾಗಿದ ಸವಾರರು!

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ವಾಹನವೊಂದರಿಂದ‌ ಡಿಸೇಲ್‌ ಸೋರಿಕೆಯಾದ ಪರಿಣಾಮ ಬೈಕ್ ಸವಾರರು ಬಿದ್ದು, ಎದ್ದು ಸಾಗಿದ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಸಮೃದ್ದಿ ಹೊಟೇಲ್ ಮುಂಭಾಗ ಶನಿವಾರ ಮಧ್ಯಾಹ್ನ ನಡೆದಿದೆ.

ಚಲಿಸುತ್ತಿದ್ದ ವಾಹನವೊಂದರ ಡಿಸೇಲ್ ಟ್ಯಾಂಕ್ ಸೋರಿಕೆಯಾಗಿ ಡಿಸೇಲ್ ಹೆದ್ದಾರಿಯ ತುಂಬೆಲ್ಲಾ ಹರಡಿಕೊಂಡಿತ್ತು. ಇದರ ಅರಿವಿಗೆ ಬಾರದ ಬೈಕ್‌ ಸವಾರರು ವೇಗದಲ್ಲಿ ಬಂದು ಬ್ರೇಕ್ ಅದುಮಿದ ವೇಳೆ ಸ್ಕಿಡ್ ಆಗಿ ಬೀಳುತ್ತಿದ್ದರು. ಕೇವಲ ನಾಲ್ಕೈದು ನಿಮಿಷದಲ್ಲಿ ನಾಲ್ವರು ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು ಕೆಲಹೊತ್ತು ಸ್ಥಳದಲ್ಲೇ ನಿಂತು ವೇಗವಾಗಿ ಬರುತ್ತಿದ್ದ ವಾಹನಗಳನ್ನು ಮೆಲ್ಲಗೆ ಬರುವಂತೆ ಸೂಚನೆ ನೀಡುವ ಮೂಲಕವಾಗಿ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಿದ್ದಾರೆ‌. ಅಲ್ಲದೇ ಹೆದ್ದಾರಿ ಗುತ್ತಿಗೆ ಕಂಪೆನಿ ಮತ್ತು ಕುಂದಾಪುರ ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದಾರೆ.


Spread the love