ಹೆದ್ದಾರಿಯಿಂದ ಸಮುದ್ರ ತೀರಕ್ಕೆ ಸಮಾನಾಂತರ ಸಂಪರ್ಕ ರಸ್ತೆ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿ:  ಸೊರಕೆ

Spread the love

ಹೆದ್ದಾರಿಯಿಂದ ಸಮುದ್ರ ತೀರಕ್ಕೆ ಸಮಾನಾಂತರ ಸಂಪರ್ಕ ರಸ್ತೆ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿ:  ಸೊರಕೆ

ಕಾಪು: ಮೀನುಗಾರರ ಸಮುದಾಯದ ಅಭಿವೃದ್ಧಿ ಜೊತೆಗೆ 3 ಲಕ್ಷದ ವರೆಗೆ ನಿಬಡ್ಡಿಯಲ್ಲಿ ಸಾಲ ಮತ್ತು ಹೆದ್ದಾರಿಯಿಂದ ಸಮುದ್ರ ತೀರಕ್ಕೆ ಸಮಾನಾಂತರ ಸಂಪರ್ಕ ರಸ್ತೆ ಮೂಲಕ ಪ್ರವಾಸೋದ್ಯಮದಲ್ಲಿ ಎಂದೂ ಕಾಣದ ರೀತಿಯಲ್ಲಿ ಕಾಪುವನ್ನು ಅಭಿವೃದ್ಧಿ ಗೊಳಿಸಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಪೋಲಿಪು ಯಾರ್ಡ್ ನಲ್ಲಿ ಮತಭೇಟೆ ನಡೆಸಿ ಮಾತನಾಡಿದ ಅವರು ಕಾಪು ಕ್ಷೇತ್ರದಲ್ಲಿ ಅಗಾಧ ಮಾನವ ಸಂಪನ್ಮೂಲ, ಜಲ ಸಂಪನ್ಮಲವಿದ್ದು ಅದನ್ನು ಸದ್ಭಳಕೆ ಮಾಡಿಕೊಂಡು ಕಾಪು ಕಡಲತೀರದ ಪ್ರವಾಸೋದ್ಯಮ ದ ಅಭಿವೃದ್ಧಿಗಾಗಿ ಹೆದ್ದಾರಿಯಿಂದ ಸಮುದ್ರ ತೀರಕ್ಕೆ ಸಮಾನಾಂತರವಾಗಿ ರಸ್ತೆ ಸಂಪರ್ಕವನ್ನು ಅಭಿವೃದ್ಧಿಗೊಳಿಸುವ ಯೋಚನೆ ಇದೆ. ಪೊಲಿಪುನಲ್ಲಿ ಜಟ್ಟಿ ನಿರ್ಮಾಣದ ಬೇಡಿಕೆ ಇದ್ದು ಪ್ರವಾಸೋದ್ಯಮದಲ್ಲಿ ಪ್ರಥಮ ಆದ್ಯತೆ ನೀಡಿ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಸೊರಕೆ ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಈ ಭಾಗದಲ್ಲಿ ದಿನಕಳೆದಂತೆ ಹೆಚ್ಚುತ್ತಿದ್ದು ಮಣಿಪುರ ಕುಡಿಯುವ ನೀರಿನ ಯೋಜನೆ ಮೂಲಕ ಈ ಸಮಸ್ಯೆ ಗೆ ಶಾಶ್ವತ ಪರಿಹಾರ ಒದಗಿಸುವ ಭಗೀರಥ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಅಂತಾ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಇದೇ ಸಂದರ್ಭ ಕಾಪು ಪಡು ಪೊಯ್ಯ ಪೊಡಿಕಲ್ಲ ಗರಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಗರಡಿಯ ಅರ್ಚಕ ಜಗನ್ನಾಥ ಪೂಜಾರಿ,ದರ್ಶನಪಾತ್ರಿ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಮುಖಂಡರಾದ ವಿಕ್ರಂ ಕಾಪು, ದೀಪಕ್ ಎರ್ಮಾಳ್, ರಾಜೇಶ್ ಮೆಂಡನ್, ಮಾಧವ ಪಾಲನ್, ರಾಧಿಕಾ, ಸದಾನಂದ ಸುವರ್ಣ, ಉಸ್ಮಾನ್, ದಿನೇಶ್ ಸಾಲ್ಯಾನ್, ಯೋಗೀಶ್ ಕೋಟ್ಯಾನ್, ದಯಾನಂದ ಕೋಟ್ಯಾನ್, ಶಂಕರ ಸಾಲ್ಯಾನ್, ಲವ ಕರ್ಕೇರ, ಶೋಭ ಪೂಜಾರಿ, ಫರ್ಜಾನ , ಹರೀಶ್ ನಾಯ್ಕ್, ದೇವರಾಜ್ ಕೋಟ್ಯಾನ್, ಮಧ್ವರಾಜ್ ಬಂಗೇರ, ಸೂರ್ಯ ನಾರಾಯಣ, ಆಶಾ ಶಂಕರ ಸಾಲ್ಯಾನ್, ಸುರೇಶ್ ಅಂಚನ್ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here