ಹೆದ್ದಾರಿ ನಿರ್ಮಾಣಕ್ಕೆ ಯಾರಪ್ಪನ ದುಡ್ಡು ಕೊಟ್ಟಿದ್ದೀರಿ?: ವಿಶ್ವನಾಥ್

Spread the love

ಹೆದ್ದಾರಿ ನಿರ್ಮಾಣಕ್ಕೆ ಯಾರಪ್ಪನ ದುಡ್ಡು ಕೊಟ್ಟಿದ್ದೀರಿ?: ವಿಶ್ವನಾಥ್

ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿರ್ಮಾಣದ ಕ್ರೆಡಿಟ್ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಸಂಸದರು ಹೇಳುತ್ತಿದ್ದಾರೆ. ಹಾಗಾದರೆ ಹೆದ್ದಾರಿ ನಿರ್ಮಾಣಕ್ಕೆ ಅವರಪ್ಪನ ಮನೆಯಿಂದ ಹಣ ತಂದಿದ್ದರಾ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಪಥ ರಸ್ತೆ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲ. ಒಂದು ಕಡೆ ಪ್ರತಾಪ್ ಸಿಂಹ ನಾನೇ ಇದರ ರುವಾರಿ ಎನ್ನುತ್ತಾರೆ. 2009ರಿಂದ 14ರವರೆಗೆ ನಾನು ಮತ್ತು ಆರ್.ಧ್ರ್ರುವನಾರಾಯಣ್ ಎಂಪಿ ಆಗಿದ್ದೆವು. ಮೊದಲು ಎರಡು ಪಥದ ರಸ್ತೆಯಾಗಿದ್ದ ಹೆದ್ದಾರಿಯನ್ನು ಎಸ್.ಎಂ.ಕೃಷ್ಣ ಅವರ ಕಾಲಾವಧಿಯಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಮಾಡಲಾಗಿತ್ತು. ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಪಿಡಬ್ಲ್ಯೂಡಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಏ.4ರಂದು ಈ ರಸ್ತೆಯನ್ನು ರಾಷ್ಟ್ರೀಯ ಹೆzರಿಯನ್ನಾಗಿ ಪರಿವರ್ತಿಸಿದರು. ಎಕ್ಸ್‌ಪ್ರೆಸ್ ಹೈವೇ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು. ನಂತರ ಮೇ 26ರಂದು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ಥಿತ್ವಕ್ಕೆ ಬಂತು. ಹೀಗಿದ್ದರೂ ಬಿಜೆಪಿ ನಾಯಕರು ಹೆದ್ದಾರಿಯನ್ನು ನಾವು ಮಾಡಿಸಿದ್ದು ಎಂದು ಬೊಗಳೆ ಹೊಡೆಯುತ್ತಿzರೆ. ರಸ್ತೆ ನಿರ್ಮಾಣಕ್ಕೆ ಯಾರಪ್ಪನ ದುಡ್ಡು ತಂದು ಕೊಟ್ಟಿದ್ದೀರೀ? ಜನರ ಬೆವರಿನ ದುಡ್ಡಿನಿಂದ ರಸ್ತೆ ನಿರ್ಮಾಣವಾಗಿದೆಯೇ ಹೊರತು ನಿಮ್ಮ ಮನೆಯಿಂದ ತಂದಿದ್ದ ದುಡ್ಡಿನಿಂದಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಬಿಜೆಪಿ ಸರ್ಕಾರದಿಂದ ಲೂಟಿ: ಯುಪಿಎ ಸರ್ಕಾರದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕೆ ಅಂದಾಜು 3 ಸಾವಿರ ಕೋಟಿಗೆ ಅನುಮೋದನೆ ಸಿಕ್ಕಿತ್ತು. ನಂತರ ಬಂದ ಬಿಜೆಪಿ ಸರ್ಕಾರ 5270 ಕೋಟಿ ರೂ.ಗೆ ಏರಿಸಿತು. ಬಳಿಕ 6420 ಕೋಟಿ ರೂ. ನಂತರ 9556 ಕೋಟಿ ರೂ.ಗೆ ಹೆಚ್ಚಳ ಮಾಡಿದ್ದಾರೆ. ರಸ್ತೆ ಸಂಪೂರ್ಣವಾಗಿ ಸಿದ್ಧವಾಗಲು ಒಟ್ಟಾರೆ 12 ಸಾವಿರ ಕೋಟಿ ರೂ. ವೆಚ್ಚವಾಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.

ದಶಪಥ ಹೆದ್ದಾರಿ ಕಾಮಗಾರಿ ದಿಲೀಪ್ ಕನ್ಸ್‌ಸ್ಟ್ರಕ್ಸನ್ ಕಡೆಯಿಂದ ಆಗುತ್ತಿದ್ದು, ಇವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಬಂಧಿಯಾಗಿದ್ದಾರೆ. ಕಾಮಗಾರಿಗೆ ಸರ್ಕಾರ ಶೇ.೪೦ರಷ್ಟು ಅನುದಾನ ನಿಡಿದರೆ ಉಳಿದ ಶೇ.60 ಹಣವನ್ನು ಟೋಲ್ ಮೂಲಕ ಸಂಗ್ರಹಿಸಲಾಗುತ್ತದೆ. ಆದರೆ ಇದೊಂದು ಅವೈಜ್ಞಾನಿಕ ರಸ್ತೆಯಾಗಿದೆ. ಸರ್ವಿಸ್ ರಸ್ತೆಯನ್ನೇ ನಿರ್ಮಿಸದೇ ಟೋಲ್ ಸಂಗ್ರಹ ಮಾಡಲು ಮುಂದಾಗಿzರೆ. ಅರೆಬರೆ ಕಾಮಗಾರಿ ಆಗಿದ್ದರೂ ಟೋಲ್ ಸಂಗ್ರಹ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಒಂದು ಕಿ.ಮೀ 1ರೂ. ಸಂಗ್ರಹಿಸಲಿ: ರಸ್ತೆ ನಿರ್ಮಾಣಕ್ಕೆ ಒಟ್ಟು 12 ಸಾವಿರ ಕೋಟಿ ಖರ್ಚಾಗಬಹುದು. ಸರ್ಕಾರ ಶೇ.40ರಷ್ಟು ಹಣ ನೀಡಲಿದೆ. ಈಗಾಗಲೇ ನಿತ್ಯ 1ಲಕ್ಷ ವಾಹನ ಅಲ್ಲಿ ಸಂಚಾರ ನಡೆಸಲಿವೆ. ಒಂದು ವಾಹನಕ್ಕೆ ಪ್ರತಿ ಕಿ.ಮೀ.ಗೆ 1 ರೂ.ನಂತೆ ಸಂಗ್ರಹಿಸಿದರೆ ದಿನಕ್ಕೆ 5 ಕೋಟಿ ರೂ., ವಾರಕ್ಕೆ 35 ಕೋಟಿ ರೂ. ಹಾಗೂ ತಿಂಗಳಿಗೆ 150ಕೋಟಿ ರೂ. ಆಗಲಿದೆ. ವರ್ಷಕ್ಕೆ 1800 ಕೋಟಿ ಆಗಲಿದೆ. ಹೀಗಿದ್ದರೂ 10 ವರ್ಷ ಅವಧಿಗೆ ಟೋಲ್ ಸಂಗ್ರಹ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಸರ್ಕಾರ ಟೋಲ್‌ನಿಂದ ಜನರ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.


Spread the love

Leave a Reply

Please enter your comment!
Please enter your name here