ಹೆಬ್ರಿ: ಅಕ್ರಮ ಜಾನುವಾರು ಸಾಗಾಟ ಓರ್ವ ಸೆರೆ,ಇನ್ನೋರ್ವ ಪರಾರಿ

Spread the love

ಹೆಬ್ರಿ: ಅಕ್ರಮ ಜಾನುವಾರು ಸಾಗಾಟ ಓರ್ವ ಸೆರೆ,ಇನ್ನೋರ್ವ ಪರಾರಿ

ಹೆಬ್ರಿ: ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವನನ್ನು ಸೆರೆ ಹಿಡಿದಿರುವ ಘಟನೆ ಚಾರಾದಲ್ಲಿ ನಡೆದಿದೆ.

ಹೆಬ್ರಿ ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಚಾರಾ ನವೋದಯಾ ಶಾಲೆಯ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಭಾನುವಾರ ರಾತ್ರಿ 8 ಗಂಟೆಗೆ ಬೇಳಂಜೆ ಕಡೆಯಿಂದ ಒಂದು ಕಾರು ಅತೀವೇಗವಾಗಿ ಬರುತ್ತಿರುವುದನ್ನು ನೋಡಿ ನಿಲ್ಲಿಸುವಂತೆ ಸೂಚನೆ ನೀಡಿದಾಗ ಚಾಲಕನು ನಿಲ್ಲಿಸದೇ ಹೆಬ್ರಿ ಕಡೆಗೆ ಅತೀವೇಗವಾಗಿ ಚಲಾಯಿಸಿದ್ದಾನೆ.

ಅನುಮಾನ ಬಂದು ವಾಹನವನ್ನು ಇಲಾಖಾ ವಾಹನದಲ್ಲಿ ಹೆಬ್ರಿ ಉಪನೀರಿಕ್ಷಕರಾದ ಸುದರ್ಶನ್ ದೊಡಮನಿ ಮತ್ತವರ ತಂಡ ಬೆನ್ನಟ್ಟಿದಾಗ ಅದರ ಚಾಲಕನು ಚಾರಾ ಸರ್ಕಲ್ ಬಳಿ ಬಂದು ಬ್ರಹ್ಮಾವರ ರಸ್ತೆಯಲ್ಲಿ ಹೋಗಿ ಮಂಡಾಡಿಜೆಡ್ಡು ಬಳಿ ಕೆರೆಬೆಟ್ಟು ಕಡೆಗೆ ಹೋಗುವ ರಸ್ತೆಗೆ ತಿರುಗಿಸಿ ಕೆರೆಬೆಟ್ಟು ಗ್ರಾಮದ ಕರೆಬೆಟ್ಟು ಮಹಾಲಿಂಗ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಕಾರು ನಿಲ್ಲಿಸಿ ತಪ್ಪಿಸಿಕೊಂಡಿದ್ದಾನೆ. ಅದರಲ್ಲಿ ಶಕೀಲ್ ಅಹಮ್ಮದ್ ಟಿ.ಕೆ ನನ್ನು ಸೆರೆ ಹಿಡಿದಿದ್ದು,ಅಕಿಲ್ ಅಹ್ಮಮದ್ ಕಾಡಿಗೆ ಓಡಿ ತಪ್ಪಿಸಿಕೊಂಡಿದ್ದಾನೆ.ಕಾರನ್ನು ಪರಿಶೀಲಿಸಿದಾಗ ಅದರ ಮುಂದಿನ ಗ್ಲಾಸ್ ಜಖಂ ಅಗಿದ್ದು,ಮುಂದಿನ ಎರಡು ಬದಿಯ ಚಕ್ರವು ಜಖಂ ಆಗಿದೆ.ಕಾರಿನ ಒಳಗಡೆ ಎರಡು ಜಾನುವಾರುಗಳು ಇದ್ದು ,ಅದರಲ್ಲಿ ಒಂದು ಜಾನುವಾರು ಮೃತಪಟ್ಟಿತ್ತು.

ಬೇಳಂಜೆ ಗ್ರಾಮದ ಈಸರಗದ್ದೆ ಎಂಬಲ್ಲಿ ರಸ್ತೆಯ ಬದಿಯಲ್ಲಿ ಮಲಗಿದ ಎರಡು ಜಾನುವಾರುಗಳನ್ನು ಕಳವು ಮಾಡಿ ಕಾರಿನಲ್ಲಿ ಅವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಬಗ್ಗೆ ಕಸಾಯಿಖಾನೆಗೆ ಕೊಂಡು ಹೋಗುತ್ತಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love