ಹೆಬ್ರಿ:  ಕೊಟ್ಟಿಗೆಗೆ ನುಗ್ಗಿ ಕತ್ತಿ ತೋರಿಸಿ ದನ ಕಳ್ಳತನ

Spread the love

ಹೆಬ್ರಿ:  ಕೊಟ್ಟಿಗೆಗೆ ನುಗ್ಗಿ ಕತ್ತಿ ತೋರಿಸಿ ದನ ಕಳ್ಳತನ

ಹೆಬ್ರಿ: ಕಬ್ಬಿನಾಲೆ ಗ್ರಾಮದ ಬಲ್ಚಾರ ಮನೆ ಎನ್ನುವಲ್ಲಿ ದಯಾಕರ್‌ ಗೌಡ ಅವರ ಮನೆಯ ದನದ ಕೊಟ್ಟಿಗೆಗೆ ನುಗ್ಗಿದ ಕಳ್ಳರು ಮನೆಯವರಿಗೆ ಕತ್ತಿ ತೋರಿಸಿ ದನಗಳನ್ನು ಕಳ್ಳತನ ಮಾಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಮನೆಯವರಾದ ದಯಾಕರ್‌ ಹಾಗೂ ಪ್ರಸಾದ್‌ ಅವರು ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಕೊಟ್ಟಿಗೆ ಹತ್ತಿರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಿ ದನದ ಕೊಟ್ಟಿಗೆ ಬಂದು ನೋಡುವಾಗ ಅಪರಿಚಿತ ವ್ಯಕ್ತಿಗಳು 2 ದನಗಳನ್ನು ಎಳೆದೊಯ್ಯುತ್ತಿದ್ದರು.

ಬಿಡಿಸಿಕೊಳ್ಳಲು ಅವರ ಸಮೀಪ ಹೋಗುತ್ತಿರುವಾಗ ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಬೆದರಿಸಿದ್ದರು. ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಸುಮಾರು 30 ಸಾವಿರ ರೂ. ಮೌಲ್ಯದ ಎರಡು ದನಗಳನ್ನು ಕದ್ದು ಪರಾರಿಯಾಗಿದ್ದಾರೆ.

ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply