ಹೆಬ್ರಿ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯಿಸಿ ದಸಂಸ ಪ್ರತಿಭಟನೆ

Spread the love

ಹೆಬ್ರಿ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯಿಸಿ ದಸಂಸ ಪ್ರತಿಭಟನೆ

ಉಡುಪಿ: ಹೆಬ್ರಿ ಮತ್ತು ಮುದ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ಅಕ್ರಮವಾಗಿ ಪೆರ್ಡೂರು ಗ್ರಾಮದ ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿ ಸುತ್ತಿದ್ದು, ಈ ಸಂಬಂಧ ಈಗಾಗಲೇ ತಹಶೀಲ್ದಾರ್ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಆದುದರಿಂದ ಆ ಪಿಡಿಓ ಅವರನ್ನು ಕೂಡಲೇ ಅಮಾನತುಗೊಳಿಸ ಬೇಕು. ಅಕ್ರಮವಾಗಿ ನಿರ್ಮಿಸಿರುವ ಮನೆಯನ್ನು ಕೂಡಲೇ ಧ್ವಂಸಗೊಳಿಸ ಬೇಕು. ಆದರೆ ಈ ಸಂಬಂಧ ಅಕ್ರಮ ಮನೆ ನಿರ್ಮಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ನೋಟೀಸ್ ನೀಡಿರುವ ಪಿಡಿಓ ಅವರನ್ನೇ ವರ್ಗಾವಣೆ ಮಾಡ ಲಾಗಿದೆ. ಇದು ಅಮಾನವೀಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.

ಪೆರ್ಡೂರು ಗ್ರಾಪಂ ಅಧ್ಯಕ್ಷರ ದಬ್ಬಾಳಿಕೆ, ಅನ್ಯಾಯ, ಕಾನೂನು ಬಾಹಿರ ಚಟುವಟಿಕೆ ಹಾಗೂ ಪೊಲೀಸ್ ನಿಷ್ಕ್ರೀಯತೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ(ಪ್ರೊ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಸೋಮವಾರ ಪೆರ್ಡೂರು ಗ್ರಾಪಂ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಮಟ್ಟದಲ್ಲಿ ಒತ್ತಡ ತರುವ ಮೂಲಕ ಇಲ್ಲಿನ ಪೊಲೀಸ್ ಇಲಾಖೆಯನ್ನು ನಿಷ್ಕ್ರೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಕಾನೂನು ಬಾಹಿರ ಕ್ರಮ ತೆಗೆದು ಕೊಂಡರೇ ಮುಂದೆ ಅಧಿಕಾರಿಗಳೇ ಬಲಿಪಶು ಆಗಬೇಕಾಗುತ್ತದೆ. ಯಾಕೆಂದರೆ ಆ ಒತ್ತಡಕ್ಕೆ ಯಾವುದೇ ರೀತಿಯ ದಾಖಲೆಗಳು ಇರುವುದಿಲ್ಲ. ಆದುದರಿಂದ ಅಧಿಕಾರಿಗಳು ಕಾನೂನು ಬದ್ಧವಾಗಿ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪೆರ್ಡೂರು ಗ್ರಾಮದ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ ಹೆಬ್ರಿ ಮತ್ತು ಮುದ್ರಾಡಿ ಪಿಡಿಒ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಅಕ್ರಮ ವಾಗಿ ನಿರ್ಮಿಸಿರುವ ಮನೆಯನ್ನು ಕೂಡಲೇ ಧ್ವಂಸಗೊಳಿಸಬೇಕು. ಆದರೆ ಅಕ್ರಮ ಮನೆ ನಿರ್ಮಿಸುತ್ತಿರುವ ಬಗ್ಗೆ ವಿವರಣೆ ನೀಡುವಂತೆ ನೋಟೀಸ್ ನೀಡಿರುವ ಪಿಡಿಒ ಅವರನ್ನೇ ವರ್ಗಾವಣೆ ಮಾಡಿರುವುದು ಅಮಾನವೀಯ ಎಂದು ಆರೋಪಿಸಿದರು.

ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಶೇಖರ್ ಹೆಜಮಾಡಿ ಮಾತನಾಡಿ ದರು. ಬಳಿಕ ಈ ಕುರಿತ ಮನವಿಯನ್ನು ಗ್ರಾಪಂ ಪಿಡಿಓ ಹಾಗೂ ಪೊಲೀಸ್ ಅಧಿಕಾರಿಗಳ ಮೂಲಕ ಡಿಸಿ, ಜಿಪಂ ಸಿಇಓ, ಎಸ್ಪಿ ಅವರಿಗೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ಪೆರ್ಡೂರು ಮಾಂಗಲ್ಯ ಸಭಾಭವನದಿಂದ ಗ್ರಾಪಂವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಆನಂದ ಬ್ರಹ್ಮಾವರ, ಜಿಲ್ಲಾ ಸಂಘಟನಾ ಸಂಚಾಲಕರಾದ ಸುಧಾಕರ್ ಪಲಿಮಾರು, ಉಮಾನಾಥ ಪಡುಬಿದ್ರಿ, ಆರತಿ ಗಿಳಿಯಾರು, ವೆಂಕಟೇಶ್ ಮಣಿಪಾಲ, ಕೇಶವ ಸಾಲ್ಯಾನ್, ಕೀರ್ತಿ ಪಡುಬಿದ್ರಿ, ಶಂಭು ಮಾಸ್ಟರ್, ಪುಷ್ಪಕರ್,, ರವಿ ಫಲಿಮಾರು, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡರಾದ ಮೈರ್ಮಾಡಿ ಸುಧಾಕರ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಸಂತೋಷ್ ಪೂಜಾರಿ ಬೈರಂಪಳ್ಳಿ, ನೀರೆ ಕೃಷ್ಣ ಶೆಟ್ಟಿ, ಶಾಂತಾರಾಮ್ ಸೂಡ, ಪ್ರವೀಣ್ ಶೆಟ್ಟಿ, ನವೀನ್ಚಂದ್ರ ಸುವರ್ಣ, ಮೈರ್ಮಾಡಿ ಸುಧಾಕರ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಚೇತನಾ ಶೆಟ್ಟಿ, ವಕೀಲ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು


Spread the love