ಹೆಮ್ಮಾಡಿ: ಕಬಡ್ಡಿ ಶಿಸ್ತು ಬದ್ದ ಕ್ರೀಡೆ – ಕೆ ಗೋಪಾಲ ಪೂಜಾರಿ

Spread the love

ಹೆಮ್ಮಾಡಿ: ಕಬಡ್ಡಿ ಶಿಸ್ತು ಬದ್ದ ಕ್ರೀಡೆ – ಕೆ ಗೋಪಾಲ ಪೂಜಾರಿ

ಕುಂದಾಪುರ: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಜಿಲ್ಲಾ ಮಟ್ಟದ ವ್ಯವಸ್ಥಿತವಾದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಥೆಗೆ ಗೌರವವನ್ನು ತಂದುಕೊಟ್ಟಿದೆ. ಗ್ರಾಮೀಣ ಭಾಗದ ಅತ್ಯಂತ ಶಿಸ್ತುಬದ್ದವಾದ ಕ್ರೀಡೆ ಎಂದರೆ ಅದು ಕಬಡ್ಡಿ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಎಲ್ಲಾ ಕಬಡ್ಡಿಪಟುಗಳು ತೀರ್ಪುಗಾರರು ಕೊಟ್ಟ ತೀರ್ಪಿಗೆ ತಲೆಬಾಗಿ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಎಂದು ಮಾಜಿ ಶಾಸಕ, ವಿ.ವಿ.ವಿ ಮಂಡಳಿಯ ಅಧ್ಯಕ್ಷ ಕೆ ಗೋಪಾಲ ಪೂಜಾರಿ ಹೇಳಿದರು.

ವಿ.ವಿ.ವಿ ಮಂಡಳಿ (ರಿ) ಹೆಮ್ಮಾಡಿ, ಸಮರ್ಪಣಾ ಎಜ್ಯುಕೇಶನ್ ಟ್ರಸ್ಟ್ (ರಿ) ಹೆಮ್ಮಾಡಿ ಆಡಳಿತದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ. ಕ್ರೀಡೆಯಲ್ಲಿ ಭಾಗವಹಿಸಿದರೆ ಸ್ಫರ್ಧೆಯಲ್ಲಿ ಗೆದ್ದಂತೆ. ತುಂಬಾ ಖುಷಿಯಿಂದ ಕಬಡ್ಡಿಯಲ್ಲಿ ಭಾಗವಹಿಸಿ ಕ್ರೀಡೆಯನ್ನು ಆನಂದಿಸಿ ಎಂದು ಸಲಹೆ ನೀಡಿದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ಬಹುಮಾನವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಛಲದಿಂದ ಬಂದಿದ್ದೀರಿ. ಎಲ್ಲರಿಗೂ ಇಲ್ಲಿ ಪ್ರಥಮ ಸ್ಥಾನ ಸಿಗುವುದಿಲ್ಲ. ಸಿಕ್ಕರೆ ಅದು ಸ್ಪರ್ಧೆಯಾಗಿ ಉಳಿಯುವುದಿಲ್ಲ. ಸೋಲು ಎನ್ನುವುದು ಮುಂದಿನ ಗೆಲುವಿಗೆ ಮೆಟ್ಟಿಲಾಗಬೇಕು. ಗೆದ್ದವರು ಸೋತವರನ್ನು ಗೌರವಿಸಬೇಕು. ದೈಹಿಕ ಶಿಕ್ಷಣ ಎನ್ನುವುದು ಶಿಕ್ಷೆಯಲ್ಲ, ಅದೊಂದು ವ್ಯಾಯಾಮ ಎಂದು ಎಲ್ಲರೂ ಅರಿತುಕೊಳ್ಳಬೇಕು. ಕ್ರೀಡೆ ಆರೋಗ್ಯವನ್ನು ವೃದ್ದಿಸುತ್ತದೆ. ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ ಜೀವನಪಾಠವನ್ನೂ ಕಲಿಸುತ್ತದೆ. ಸಾಧನೆ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ. ಎಂದರು.

ಜನತಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ಜಿಲ್ಲಾ ಪದವಿಪೂರ್ವ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್, ತಾಲೂಕು ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ಆಡಳಿತ ಮಂಡಳಿಯ ಉಪಾಧ್ಯಕ್ಷ ಮಂಜುನಾಥ ಗಾಣಿಗ, ಕಾರ್ಯದರ್ಶಿ ಸುನೀಲ್ ಚಿತ್ತಾಲ್, ಕೋಶಾಧಿಕಾರಿ ಕಾರ್ತಿಕೇಯ ಎಮ್.ಎಸ್, ಉಪಪ್ರಾಂಶುಪಾಲ ರಮೇಶ್ ಪೂಜಾರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕರಾದ ವಸಂತ್ ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಡಿ ಇದ್ದರು.

ಜನತಾ ಪಿಯು ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಪ್ರಸ್ತಾಪಿಸಿ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಪ್ರಿಯಾಂಕ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here