ಹೆಮ್ಮಾಡಿ ಬಳಿ ಬೈಕ್ ಸ್ಕಿಡ್: ಇಬ್ಬರು ಬೈಕ್ ಸವಾರರು ಗಂಭೀರ

Spread the love

ಹೆಮ್ಮಾಡಿ ಬಳಿ ಬೈಕ್ ಸ್ಕಿಡ್: ಇಬ್ಬರು ಬೈಕ್ ಸವಾರರು ಗಂಭೀರ

ಕುಂದಾಪುರ: ಶರವೇಗದಲ್ಲಿ‌ ಧಾವಿಸಿದ ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿ ಆವರಣಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಸುಳ್ಸೆ ಕ್ರಾಸ್ ಬಳಿ ಸಂಭವಿಸಿದೆ.

ಗಾಯಾಳುಗಳನ್ನು ಚಿತ್ತೂರು ಮಾರಣಕಟ್ಟೆ ನಿವಾಸಿಗಳೆಂದು ಗುರುತಿಸಲಾಗಿದೆ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು, ಹೆಮ್ಮಾಡಿಯಿಂದ ಚಿತ್ತೂರು ಕಡೆಗೆ ಅತೀ ವೇಗವಾಗಿ ಬೈಕ್ ಅನ್ನು ಚಲಿಸುತ್ತಿರುವಾಗ ಹೆಮ್ಮಾಡಿಯ ಸುಳ್ಸೆ ಕ್ರಾಸ್ ನಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ರಸ್ತೆ ಸಮೀಪದಲ್ಲಿರಿಸಿದ್ದ ಮೋರಿಗೆ ಢಿಕ್ಕಿ ಹೊಡೆದ ಬಳಿಕ ಚರಂಡಿ ಆವರಣಗೋಡೆಗೆ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸವಾರ ಹಾಗೂ ಸಹಸವಾರ ಮೇಲಕ್ಕೆ ಜಿಗಿದು ಐವತ್ತು ಮೀಟರ್ ದೂರದಲ್ಲಿ ಬಿದ್ದಿದ್ದಾರೆ. ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದೆ‌. ಓರ್ವ‌ನ ಮುಖಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಇನ್ನೋರ್ವನ ಕಾಲಿಗೆ ಬಲವಾದ ಏಟು ತಗುಲಿದೆ. ತಕ್ಷಣವೇ ಸ್ಥಳೀಯರು ಪ್ರಥಮ ಚಿಕಿತ್ಸೆ ಕೊಡಿಸಿ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಇಬ್ರಾಹಿಂ ಗಂಗೊಳ್ಳಿಯರ ಆಪತ್ಭಾಂದವ ಆಂಬುಲೆನ್ಸ್ ಮೂಲಕ ಚಾಲಕ ರಜ್ಜಬ್ ಬುಡ್ಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ‌ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


Spread the love