
ಹೆಮ್ಮಾಡಿ: ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸನ್ಮಾನ
ಹೆಮ್ಮಾಡಿ: ಜನತಾ ಪ್ರೌಢಶಾಲೆ ಹೆಮ್ಮಾಡಿಯಲ್ಲಿ 2021-22 ನೇ ಸಾಲಿನಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವು ನಡೆಯಿತು. ಅಂದಿನ ಸಭೆಯ ಸಭಾಧ್ಯಕ್ಷರಾಗಿ ನಮ್ಮ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಕೆ ರಘುರಾಮ ಪೂಜಾರಿ ಇವರು ವಹಿಸಿದ್ದರು.
ಅಂದಿನ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವೀರೇಶ್ ಪೂಜಾರಿ, ಉದ್ಯಮಿ ಬೆಂಗಳೂರು., ಶ್ರೀಧರ ರಾವ್, ಕಟ್ಬೆಲ್ತೂರು, ಬಾಲ್ತುಝಾರ್ ಲೋಬೋ, ಉಪನ್ಯಾಸಕರಾದ ಡಾ. ಮಂಜುನಾಥ, ಜನತಾ ಪ.ಪೂ.ಕಾಲೇಜು ಹೆಮ್ಮಾಡಿ., ಗುರುರಾಜ ಹೆಮ್ಮಾಡಿ, ರಾಘವೇಂದ್ರ ಕುಲಾಲ್, ಜಯಾ ಶೇಖರ, ವಿದ್ಯುತ್ ಗುತ್ತಿಗೆದಾರರಾದ ಶ್ರೀ ಚಂದ್ರ ಪ್ರಜಾರಿ, ಲಕ್ಷ್ಮೀ, ಸಾಲಿಗ್ರಾಮ., ಇವರು ಸಭೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಮಂಜು ಕಾಳಾವರ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಹಿರಿಯ ಶಿಕ್ಷಕರಾದ ದಿನಕರ .ಎಸ್. ವಂದನಾರ್ಪಣೆಗೈದರು, ಶಿಕ್ಷಕರಾದ ಜಗದೀಶ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಕ ವೃಂದ, ಅಧ್ಯಾಪಕೇತರ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು