ಹೆಮ್ಮಾಡಿ: 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣೆ ಹಾಗೂ ದಾನಿಗಳಿಗೆ ಸನ್ಮಾನ

Spread the love

ಹೆಮ್ಮಾಡಿ: 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣೆ ಹಾಗೂ ದಾನಿಗಳಿಗೆ ಸನ್ಮಾನ

ಹೆಮ್ಮಾಡಿ: ಜನತಾ ಪ್ರೌಢಶಾಲೆ ಹೆಮ್ಮಾಡಿಯಲ್ಲಿ 2022-23ನೇ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣಾ ಮತ್ತು ದಾನಿಗಳಿಗೆ ಸನ್ಮಾನ ಸಮಾರಂಭವು  ನಡೆಯಿತು. ಅಂದಿನ ಸಭೆಯ ಸಭಾಧ್ಯಕ್ಷರಾಗಿ ನಮ್ಮ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ ರಘುರಾಮ ಪೂಜಾರಿ ಇವರು ವಹಿಸಿದ್ದರು.

ಅಂದಿನ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆಗೆ ಧನ ಸಹಾಯ ಮಾಡಿದ ವೀರೇಶ್ ಪೂಜಾರಿ, ಉದ್ಯಮಿ ಬೆಂಗಳೂರು., ಉಚಿತ ನೋಟ್ ಪುಸ್ತಕ ವಿತರಣೆಗೆ ಧನ ಸಹಾಯ ಮಾಡಿದ ಶಾಲೆಯ ಹಳೆ ವಿದ್ಯಾರ್ಥಿ ಶ್ರೀಧರ ರಾವ್, ಕಟ್‍ಬೆಲ್ತೂರು, ಶಾಲೆಗೆ ಧನ ಸಹಾಯ ಮಾಡಿದ ಹಿರಿಯವರಾದ ಬಾಲ್ತುಝಾರ್ ಲೋಬೋ, ಉಪನ್ಯಾಸಕರಾದ ಡಾ. ಮಂಜುನಾಥ, ಜನತಾ ಸ.ಪ.ಪೂ.ಕಾಲೇಜು ಹೆಮ್ಮಾಡಿ., ಗುರುರಾಜ ಹೆಮ್ಮಾಡಿ,  ರಾಘವೇಂದ್ರ ಕುಲಾಲ್, ಜಯಾ ಶೇಖರ, ಪ್ರವಿತಾ ಅಶೋಕ್, ವಿದ್ಯುತ್ ಗುತ್ತಿಗೆದಾರರಾದ ಚಂದ್ರ ಪೂಜಾರಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಅಲ್ಲದೆ ಶಾಲೆಯ ಅಕ್ಷರ ದಾಸೋಹಕ್ಕೆ ಅತ್ಯಂತ ಕಡಿಮೆ ದರದಲ್ಲಿ ತರಕಾರಿ ನೀಡುತ್ತಿರುವ ಲಕ್ಷ್ಮೀ, ಸಾಲಿಗ್ರಾಮ., ಮತ್ತು ಅಡುಗೆ ಸಿಬ್ಬಂದಿಯವರಾದ ಶ್ರೀಮತಿ ಸರೋಜ,  ಕಲ್ಪನಾ, ಪಾರ್ವತಿ ಇವರನ್ನು ಸನ್ಮಾನಿಸಲಾಯಿತು.

ಮುಖ್ಯೋಪಾಧ್ಯಾಯರಾದ ಶ್ರೀ ಮಂಜು ಕಾಳಾವರ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಶ್ರೀಧರ ಗಾಣಿಗ ಇವರು ಸನ್ಮಾನಿತರ ಕಿರು ಪರಿಚಯವನ್ನು ಮಾಡಿದರು, ಹಿರಿಯ ಶಿಕ್ಷಕರಾದ ದಿನಕರ .ಎಸ್. ವಂದನಾರ್ಪಣೆಗೈದರು, ಶಿಕ್ಷಕರಾದ ಜಗದೀಶ ಶೆಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಅಧ್ಯಾಪಕ ವೃಂದ, ಅಧ್ಯಾಪಕೇತರ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು


Spread the love