ಹೊಯಿಗೆ ಬಜಾರ್, ಬೋಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತ ಯಾಚನೆ 

Spread the love

ಹೊಯಿಗೆ ಬಜಾರ್, ಬೋಳಾರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತ ಯಾಚನೆ 

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಇಂದು   ನಗರದ ಹೊಯಿಗೆ ಬಜಾರ್ ವಾರ್ಡಿನ ವ್ಯಾಪ್ತಿಯ ಪಟೇಲ್ ಕಾಂಪೌಂಡ್, ಸುಭಾಷ್ ನಗರ, ಪಾದೆಕಲ್, ಬೋಳಾರ್ ಲೀವೆಲ್, ಫೆರಿ ರಸ್ತೆಯಲ್ಲಿರುವ ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಪರವಾಗಿ ಮತ ಚಲಾಯಿಸಬೇಕೆಂದು ಜನರಲ್ಲಿ ವಿನಂತಿಸಿದರು.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುತ್ತ ಲೋಬೊ ರವರು, ಖಂಡಿತವಾಗಿಯೂ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರಲಿದೆ. ಈಗಿರುವ ಬಿಜೆಪಿ ಸರಕಾರ ಉತ್ತಮ ಆಡಳಿತ ಕೊಡಲು ವಿಫಲವಾಗಿದೆ.ದಿನದಿಂದ ದಿನಕ್ಕೆ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಜನ ಬೇಸತ್ತು ಹೋಗಿದ್ದಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಂದು ಕೊಡಲು ಆತುರದಿಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ವಾರ್ಡ್ ಅಧ್ಯಕ್ಷ ಶರತ್, ಪ್ರಮುಖರಾದ ಟಿ. ಕೆ. ಸುಧೀರ್, ರಮಾನಂದ ಪೂಜಾರಿ, ಕವಿತ ವಾಸು, ಪ್ರವೀತಾ ಕರ್ಕೇರ, ಸಂದೀಪ್, ಮಹೇಶ್, ಹೈದರ್ ಆಲಿ, ಜಯರಾಜ್ ಕೋಟ್ಯಾನ್, ಶಾನ್ ಡಿಸೋಜಾ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.

ಬೋಳಾರ ವಾರ್ಡಿನ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ರಿಂದ ಮತ ಯಾಚನೆ 

ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಇಂದು ತಾ 21.4.2023ರಂದು 58ನೇ ಬೋಳಾರ ವಾರ್ಡಿನ ವ್ಯಾಪ್ತಿಗೆ ಬರುವ ಮುಳಿಹಿತ್ಲು, ಲೀವೆಲ್,ಗುಜ್ಜರೆಕೆರೆ,ಕಾಸಿಯ ಚರ್ಚ್ ಪರಿಸರದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.


ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಸದಾಶಿವ ಅಮೀನ್, ಬೋಳಾರ ವಾರ್ಡ್ ಅಧ್ಯಕ್ಷ ನೆಲ್ಸನ್ ರೋಚ್, ಮಾಜಿ ಕಾರ್ಪೊರೇಟರ್ ರತಿಕಲಾ, ಪ್ರಮುಖರಾದ ಬಾನೆಟ್ ಡಿ ಮೆಲ್ಲೋ,ರಮಾನಂದ ಬೋಳಾರ,ಮಹೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


Spread the love