ಹೊರ ರಾಜ್ಯಗಳ ಜನರ ಹೆಸರನ್ನು ಪೊಲೀಸ್ ಇಲಾಖೆಯಲ್ಲಿ ನೊಂದಾಯಿಸಿ: ಜೆಡಿಎಸ್‌

Spread the love

ಹೊರ ರಾಜ್ಯಗಳ ಜನರ ಹೆಸರನ್ನು ಪೊಲೀಸ್ ಇಲಾಖೆಯಲ್ಲಿ ನೊಂದಾಯಿಸಿ: ಜೆಡಿಎಸ್‌

ದ.ಕ. ಜಿಲ್ಲೆಯಲ್ಲಿ ಉಳಾಯಿಬೆಟ್ಟುನಲ್ಲಿ ಮುಗ್ಧ ಬಾಲಕಿಯ ಮೇಲೆ ನಡೆದ ಪೈಶಾಚಿಕ ಕೃತ್ಯದ ಬಗ್ಗೆ ಜಿಲ್ಲಾ ಜೆಡಿಎಸ್ ಪಕ್ಷವು ತೀವ್ರ ನೋವನ್ನು ವ್ಯಕ್ತಪಡಿಸುತ್ತದೆ. ಈ ರೀತಿಯ ಅಮಾನುಷ ಕೃತ್ಯವು ಉತ್ತರ ಭಾರತದಲ್ಲಿ ನಡೆಯುವ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಒಂದು ಬಡ ಕುಟುಂಬದ ವಲಸೆ ಕಾರ್ಮಿಕರ ಮುಗ್ಧ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆಯನ್ನು ಜಿಲ್ಲೆಯ ಜನತೆ, ಸಂಘಟನೆಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಶೋಚನೀಯ. ಈ ಘಟನೆ ಸ್ಥಳೀಯರಲ್ಲಿ ನಡೆದಲ್ಲಿ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿತ್ತು. ಈ ಘಟನೆ ನಮ್ಮ ಜಿಲ್ಲೆಗೆ ಎಚ್ಚರಿಗೆ ಗಂಟೆಯಾಗಿರುತ್ತದೆ.

ಜಿಲ್ಲೆಯಲ್ಲಿ ಉದ್ಯೋಗನಿಮಿತ್ತ ಖಾಸಗಿ, ಕೈಗಾರಿಕೆ, ಕಟ್ಟಡ ನಿರ್ಮಾಣ ಕೆಲಸಕ್ಕೆ ಹೊರರಾಜ್ಯಗಳಿಂದ ಜನರು ನಿರಂತರವಾಗಿ ಬರುತ್ತಿದ್ದು, ಯಾವುದೇ ಹಿನ್ನೆಲೆ ತಿಳಿಯದೆ ಸಂಬಂಧಪಟ್ಟವರು ಕೆಲಸಕ್ಕೆ ನಿಯುಕ್ತಿಗೊಳಿಸಿರುತ್ತಾರೆ. ಆದ್ದರಿಂದ ಇನ್ನು ಮುಂದೆ ಹೊರರಾಜ್ಯ, ಜಿಲ್ಲೆಗಳಿಂದ ಬರುವ ಜನರ ಸಂಪೂರ್ಣ ವಿಳಾಸವನ್ನು ಸಂಬಂಧಪಟ್ಟವರು ಪೊಲೀಸ್ ಇಲಾಖೆಯಲ್ಲಿ ಕಡ್ಡಾಯವಾಗಿ ನೊಂದಾಯಿಸಲು ಆದೇಶ ಹೊರಡಿಸಬೇಕು. ಮಾತ್ರವಲ್ಲಿ ಇಲಾಖೆ ಕೂಡ ಅವರ ಹಿನ್ನೆಲೆ ಪರಿಶೀಲಿಸುವ ಸೂಕ್ತ ಕ್ರಮವನ್ನು ವಹಿಸತಕ್ಕದ್ದು. ಈ ಘಟನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಹಾಗೂ ಜೆಡಿಎಸ್ ಮುಖಂಡ ವಸಂತ ಪೂಜಾರಿಯವರು ಆಗ್ರಹಿಸಿದ್ದಾರೆ.


Spread the love

Leave a Reply