
ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಅಪರಾಧಗಳನ್ನು ಬೇಧಿಸಬೇಕು – ಸಚಿವ ಸುನೀಲ್ ಕುಮಾರ್
ಕಾರ್ಕಳ: ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಮೂಲಸೌಕರ್ಯ ವನ್ನು ರೂಪಿಸುವುದು ಸರಕಾರದ ಮೂಲ ಉದ್ದೇಶವಾಗಿದೆ ಎಂದು ಇಂಧನ ಹಾಗು ಕನ್ನಡ ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಹೇಳಿದರು ಅವರು ಹೆಬ್ರಿಯ ತಾಲೂಕಿನ ಪೋಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯದ ಸಮಯ ಆರೋಗ್ಯವಂತರೆ ಹೆಚ್ಚಿದ್ದು ಆಸ್ಪತ್ರೆಗಳು ಬೆರಳೆಣಿಕೆಯಷ್ಟಿತ್ತು.ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದಂತೆ ಅಪರಾಧಗಳು, ಕಾಯಿಲೆಗಳು ಹೆಚ್ಚುತ್ತಿವೆ. ನೂರಾರು ಸಮಸ್ಯೆಗಳ ನಡುವೆ ಸವಾಲುಗಳು ಎದುರಾಗುತ್ತಿವೆ. ಯೊಚನಾ ಲಹರಿಗಳು ಬದಲಾಗುತ್ತಿರುವ ಕಾಲಘಟಕ್ಕೆ ನಾವು ಒಗ್ಗಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ಆಧಾರಿತ ಸೇವೆಗಳು ಪೋಲಿಸ್ ಇಲಾಖೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಪರಾಧಗಳನ್ನು ಭೇಧಿಸಬೇಕು ಎಂದು ಸಚಿವರು ಹೇಳಿದರು.
ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ. ಹಾಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಹೊಸ ಕಟ್ಟಡ ಬಂದ ಬಳಿಕ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ಜೊತೆ ಜನ ಸಾಮಾನ್ಯರ ಸಹಕಾರ ಬಹುಮುಖ್ಯ ವಾಗಿದೆ. ಧಾರವಾಡದಲ್ಲಿ ಹೊಸ ತಂತ್ರಜ್ಞಾನ ಅಧಾರಿತ ಪೋಲಿಸ್ ತರಬೇತಿ ಘಟಕ ಸ್ಥಾಪನೆಗೊಂಡಿದ್ದು ಅಲ್ಲಿ ತರಬೇತಿ ಪಡೆದ ಪೋಲೀಸರು ಸ್ಥಳೀಯ ಠಾಣೆಗಳಲ್ಲಿ ನಿಯೋಜನೆಗೊಳ್ಳುವ ಮೂಲಕ ಸೈಬರ್ ಅಪರಾಧಗಳನ್ನು ಭೇದಿಸಲು ಸಹಕಾರಿ ಯಾಗುತ್ತಿದೆ. ಜಿಲ್ಲೆಯ ಸೆನ್ ಪೋಲಿಸ್ ಘಟಕವನ್ನು ನಾಲ್ಕು ಕೋಟಿ ವೆಚ್ಚದಲ್ಲಿ ಆಧುನಿಕರಿಸುತಿದ್ದು ಹೊಸ ಹೊಸ ಸೇವೆಗಳು ಪೋಲೀಸರಿಗೆ ಒದಗಿಸಲಾಗುತಿದ್ದು ಸೈಬರ್ ಕ್ರೈಮ್ ಕಡಿವಾಣ ಹಾಕಬಹುದಾಗಿದೆ ಎಂದರು.
ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ ಆಧುನಿಕ ಯುಗದಲ್ಲಿ ಹೊಸ ಹೊಸ ಅಪರಾಧಗಳು ಸವಾಲಾಗಿ ಪರಿಣಮಿಸಿದ್ದು ಆ ಸವಾಲುಗಳನ್ನು ಮೆಟ್ಟಿನಿಲ್ಲಲು ಪೋಲಿಸ್ ಇಲಾಖೆ ಶಕ್ತವಾಗಿದೆ ಎಂದರು.
ಹೆಬ್ರಿ ಗ್ರಾ. ಪಂ. ಅಧ್ಯಕ್ಷೆ ಮಾಲತಿ ಮಾತನಾಡಿ ಪೋಲಿಸ್ ಇಲಾಖೆ ಮೂಲಕ ನೊಂದ ಮನಸ್ಸುಗಳಿಗೆ ಧೈರ್ಯ ತುಂಬುವ ಕೆಲಸವಾಗಲಿ ಎಂದರು.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರ ಸಂಜೀವ ವಿ. ರೆಡ್ಡಿ, , ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜೆ ಶಶಿಧರ್ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಉಪಸ್ಥಿತರಿದ್ದರು..
ಕಟ್ಟಡ ಗುತ್ತಿಗೆ ದಾರ ಚರಣ್ ಹೆಗ್ಡೆ, ಪೋಲೀಸ್ ಅಭಿವೃದ್ಧಿ ನಿಗಮದ ಮುಖ್ಯ ಅಭಿಯಂತರ ಸನ್ನೆಗೌಡ , ಸಂಜಯ್ ಯವರನ್ನು ಸನ್ಮಾನಿಸಲಾಯಿತು.. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಟಿ. ಸಿದ್ಧಲಿಂಗಪ್ಪ ಧನ್ಯವಾದ ವಿತ್ತರು.