ಹೊಸ ವರ್ಷಾಚರಣೆ: ಡಿಸೆಂಬರ್ 31 ರ ಸಂಜೆ 6 ರಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ

Spread the love

ಹೊಸ ವರ್ಷಾಚರಣೆ: ಡಿಸೆಂಬರ್ 31 ರ ಸಂಜೆ 6 ರಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ

ಬೆಂಗಳೂರು: ನಗರದಲ್ಲಿ ಬೀದಿಗಿಳಿದು ಹೊಸ ವರ್ಷದ ಸಂಭ್ರಮಾಚರಣೆ ನಡೆಸಲು ಅವಕಾಶ ಇರುವುದಿಲ್ಲ ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಿಗ್ಗೆ 6 ವರೆಗೆ ಸಿ ಆರ್ ಪಿ ಸಿ ಸೆಕ್ಷನ್ 144 ಜಾರಿ ಮಾಡಲಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಹೇಳಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಜನರು ಗುಂಪು ಸೇರುವುದನ್ನು ತಪ್ಪಿಸಲು ನೋ-ಮ್ಯಾನ್ ಝೋನ್ ರೂಪಿಸಲಾಗುತ್ತಿದೆ. ಎಂ ಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ ಹಾಗೂ ಇಂದಿರಾನಗರದಲ್ಲಿ ಜನರು ನಿಲ್ಲದಂತೆ ತಡೆಯಲು ವ್ಯವಸ್ಥೆ ರೂಪಿಸಲಾಗುತ್ತಿದೆ. ಮುಂಚಿತವಾಗಿ ಪಬ್, ಬಾರ್ ಗಳು ರೆಸ್ಟೋರೆಂಟ್ ಗಳಿಂದ ಪಡೆದಿರುವ ಕಾಯ್ದಿರಿಸಿರುವ ಕೂಪನ್ ಗಳಿದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.

ಹೊಸ ವರ್ಷಾಚಾರಣೆ ಸಂದರ್ಭದಲ್ಲಿ ಸೇರುವ ಜನಜಂಗುಳಿಯಿಂದಾಗಿ ಕೊರೋನಾ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೆ ಕ್ರಮ ವಹಿಸಲಾಗಿದೆ.


Spread the love