ಹೋಟೆಲೊಂದರಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ – ಮೂವರ ಬಂಧನ

Spread the love

ಹೋಟೆಲೊಂದರಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ – ಮೂವರ ಬಂಧನ

ಮಂಗಳೂರು: ನಗರದ ಹೋಟೆಲೊಂದರಲ್ಲಿ ಯುವತಿಯ ಮೇಲೆ ಆಕೆಯ ಹಳೆಯ ಸ್ನೇಹಿತ ಮತ್ತು ಮತ್ತವನ ಗೆಳೆಯರು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಬೊಕ್ಕಪಟ್ಣದ ತ್ರಿಶೂಲ್ ಸಾಲಿಯಾನ್, ಕೋಡಿಕಲ್ ನ ಸಂತೋಷ್ ಪೂಜಾರಿ ಮತ್ತು ಅಶೋಕ್ ನಗರದ ದ್ಯಾನೇಶ್ ಅರನ್ ಎಂದು ಗುರುತಿಸಲಾಗಿದೆ.

ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಮತ್ತು ಪ್ರಧಾನ ಆರೋಪಿ ತ್ರಿಶೂಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹವಾಗಿ, ಪ್ರೀತಿಯಾಗಿತ್ತು. ನಂತರ ವೈಮಸ್ಸು ಉಂಟಾಗಿ ಯುವತಿ ಆತನಿಂದ ದೂರವಾಗಲು ನಿರ್ಧರಿಸಿದ್ದಳು. ಹೀಗಾಗಿ ಆತ ನೀಡಿದ್ದ ಗಿಫ್ಟ್ ಗಳನ್ನು ಮರಳಿಸಲು ಕೆಲ ದಿನಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ಬಳಿ ಬರುವಂತೆ ಹೇಳಿದ್ದಳು. ಈ ವೇಳೆಯೂ ತ್ರಿಶೂಲ್ ಆಕೆಯ ಮೇಲೆ ದಾಳಿಗೆ ಯತ್ನಿಸಿದ್ದ.

ಕಳೆದ ಜ.30ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಯುವತಿ ತನ್ನ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ ವೇಳೆ ತನ್ನ ಸ್ನೇಹಿತರೊಂದಿಗೆ ಆಗಮಿಸಿ ಆಕೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಈ ವೇಳೆ ಆಕೆಯ ಜೊತೆಗಿದ್ದ ಸ್ನೇಹಿತರು ಆಕೆಯನ್ನು ಕಾಪಾಡಲು ಯತ್ನಿಸಿದ್ದು, ಆಗ ಓರ್ವ ಸ್ನೇಹಿತ ಚೂರಿ ಇರಿತಕ್ಕೆ ಒಳಗಾಗಿದ್ದ.

ಘಟನೆಗೆ ಸಂಬಂಧಿಸಿದಂತೆ ಯುವತಿಯು ಕದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ನನ್ನ ಮತ್ತು ನನ್ನ ಸ್ನೇಹಿತರ ಮೇಲೆ ಕೊಲೆ ಯತ್ನ ನಡೆಸಲಾಗಿದೆ ಎಂದು ಯುವತಿ ದೂರು ನೀಡಿದ್ದಳು


Spread the love