ಹ್ಯಾಕಥಾನ್ ನಲ್ಲಿ ಅಮೃತ ವಿಶ್ವವಿದ್ಯಾಪೀಠಂಗೆ ಗೆಲುವು

Spread the love

ಹ್ಯಾಕಥಾನ್ ನಲ್ಲಿ ಅಮೃತ ವಿಶ್ವವಿದ್ಯಾಪೀಠಂಗೆ ಗೆಲುವು

ಮೈಸೂರು: ಅಮೃತ ವಿಶ್ವವಿದ್ಯಾಪೀಠಂ, ಮೈಸೂರು ಕ್ಯಾಂಪಸ್‌ನ ಇಂಟಿಗ್ರೇಟೆಡ್ ಎಂಸಿಎ ಕೋರ್ಸ್‌ನ ತಂಡವು ಇತ್ತೀಚಿಗೆ ಒಡಿಶಾದ ಜಿಐಇಟಿ ವಿಶ್ವವಿದ್ಯಾನಿಲಯದಲ್ಲಿ ನಡೆದ ‘ಸ್ಮಾರ್ಟ್‌ಇಂಡಿಯಾ ಹ್ಯಾಕಥಾನ್-2022’ರ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರಥಮ ಸ್ಥಾನದೊಂದಿಗೆ 1ಲಕ್ಷರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿದೆ.

ಈ ಪ್ಯಾನ್‌ಇಂಡಿಯಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ವಿಭಾ ಹರೀಶ್ (ಟೀಂ ಲೀಡರ್), ಪದ್ಮಜಾ ಪ್ರೇಕ್ಷಾ ಡಿ, ಅಭೀಜ್ಞಾ ಪಿ. ಎಸ್, ಪ್ರಣವ್‌ಜೀವನ್, ಅಪೇಕ್ಷಾರಾವ್ ಹಾಗೂ ಸುರಭಿಆರ್ ಅವರನ್ನೊಳಗೊಂಡ “ಜೀನಿಯಸ್ ನೋಬ್ಸ್‌ಅಂಡ್‌ಎನ್‌ಟಿಎ” ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸ್ಮಾರ್ಟ್‌ಇಂಡಿಯಾ ಹ್ಯಾಕಥಾನ್-2022, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಇನೋವೇಶನ್ ಸೆಲ್ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ವತಿಯಿಂದ ರಾಜ್ಯಾದ್ಯಂತ ನಡೆದ ವಿನೂತನ ಕಾರ್ಯಕ್ರಮ ಇದಾಗಿದೆ. ಇಲ್ಲಿ ವಿದ್ಯಾರ್ಥಿಗಳು ನಮ್ಮ ದೇಶ ಎದುರಿಸುತ್ತಿರುವ ವಿವಿಧ ಸವಾಲುಗಳು, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರಗಳನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಅಲ್ಲದ, ದೇಶದ ಪ್ರಗತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಮಾದರಿ ಯೋಜನೆಗಳನ್ನು ರೂಪಿಸಿ ಪ್ರಸ್ತುತ ಪಡಿಸಿದ್ದಾರೆ. ದೇಶದಯುವ ಮನಸ್ಸುಗಳೊಂದಿಗೆ ಸಂವಹನ ನಡೆಸಲು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಲವಾರು ತಂಡಗಳೊಂದಿಗೆ ಸಹಯೋಗ ಪಡೆಯಲು “ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್” ಒಂದು ಉತ್ತಮ ವೇದಿಕೆಯಾಗಿದೆ. ರಾಷ್ಟ್ರ ಮಟ್ಟದ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅಮೃತ ವಿಶ್ವ ವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ನಿಂದ ಒಟ್ಟು ಮೂರು ತಂಡಗಳು ಆಯ್ಕೆಯಾಗಿದ್ದವು.


Spread the love

Leave a Reply

Please enter your comment!
Please enter your name here