​ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು- ಪ್ರಕಾಶ್ ಜತ್ತನ್

Spread the love

​ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು- ಪ್ರಕಾಶ್ ಜತ್ತನ್

​ಉಡುಪಿ: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬ್ರಹ್ಮಾವರ ವಲಯಾಧ್ಯಕ್ಪ ಪ್ರಕಾಶ್ ಜತ್ತನ್ ಹೇಳಿದರು.

ಅವರು ಉಡುಪಿ ವಲಯದವರು ಆಯೋಜಿಸಿದ್ದ ನಗರಸಭೆಯ ಬೀಡನಗುಡ್ಡೆ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ನಾವು ಸದಾ ಆರೋಗ್ಯವಂತರಾಗಿರಬೇಕಾದರೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಇನ್ನೋರ್ವ ಅತಿಥಿ ಉಡುಪಿ ವಲಯದ ಮಾಜಿ ಅಧ್ಯಕ್ಷ ಅನಿಶ್ ಶೆಟ್ಟಿಗಾರ್ ಮಾತನಾಡಿ ಪ್ರತಿಯೊಬ್ಬರು ವೃತ್ತಿಯ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸ ಬೇಕು ಎಂದು ಕರೆಯಿತ್ತರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕ್ರೀಡಾಕಾರ್ಯದರ್ಶಿಗಳಾದ ಅಶೋಕ್ ಪುತ್ರನ್, ಪ್ರವೀಣ್ ಖಂಡಿಗೆ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಉಪಾಧ್ಯಕ್ಷ ಸುರಭಿ ಸುದೀರ್ ಶೆಟ್ಟಿ, ಎಸ್ ಕೆಪಿಎ ಸೊಸೈಟಿ ಅಧ್ಯಕ್ಷ ಕೆ ವಾಸುದೇವ ರಾವ್, ಕಟ್ಟಡ ಸಮಿತಿ ಸಂಚಾಲಕ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪರ್ವೀನ್ ಕೊರೆಯ ಧನ್ಯವಾದವಿತ್ತರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.


Spread the love