Home Mangalorean News Kannada News ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರವನ್ನು ಸ್ವತಃ ಸೇವಿಸಿ ಗುಣಮಟ್ಟ ಪರೀಕ್ಷಿಸಿದ ಸಚಿವೆ ಜಯಮಾಲಾ

ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರವನ್ನು ಸ್ವತಃ ಸೇವಿಸಿ ಗುಣಮಟ್ಟ ಪರೀಕ್ಷಿಸಿದ ಸಚಿವೆ ಜಯಮಾಲಾ

Spread the love

ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರವನ್ನು ಸ್ವತಃ ಸೇವಿಸಿ ಗುಣಮಟ್ಟ ಪರೀಕ್ಷಿಸಿದ ಸಚಿವೆ ಜಯಮಾಲಾ

ಉಡುಪಿ: ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಡಾ. ಜಯಮಾಲರವರು ಗುರುವಾರದಂದು ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಂಗನವಾಡಿ ಕೇಂದ್ರಗಳು ಹಾಗೂ ಸುಧಾರಣಾ ಸಂಸ್ಥೆ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಉಡುಪಿ ಶಿಶು ಅಭಿವೃದ್ದಿ ಯೋಜನೆಯ ಕಡಿಯಾಳಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಹಾಗೂ 13 ಮಕ್ಕಳ ಕೇಂದ್ರದಲ್ಲಿ ಹಾಜರಿರುವ ಬಗ್ಗೆ ಗಮನಿಸಿ ಮಕ್ಕಳಿಗೆ ವಿತರಿಸಲಾಗುವ ಪೌಷ್ಟಿಕ ಆಹಾರವಾದ ಮೊಳಕೆ ಬರಿಸಿದ ಹೆಸರುಕಾಳು ಹಾಗೂ ಕೆನೆಭರಿತ ಹಾಲನ್ನು ಸ್ವತಃ ಸೇವಿಸಿ ಗುಣಮಟ್ಟವನ್ನು ಹಾಗೂ ರುಚಿಯನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಅಗತ್ಯವಿರುವ ಇಂಟರ್ ಲಾಕ್ ವ್ಯವಸ್ಥೆ, ಶಿಶು ಸ್ನೇಹಿ ಶೌಚಾಲಯ ಹಾಗೂ ಹೊರಾಂಗಣದ ಮುಂಭಾಗದಲ್ಲಿ ವಿಸ್ತರಣೆಯನ್ನು ಮನಗಂಡರು.

ಬಳಿಕ ನಿಟ್ಟೂರಿನ ಕೊಡಂಕೂರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ 9 ಮಕ್ಕಳು , ಕಾರ್ಯಕರ್ತೆ ಹಾಗೂ ಸಹಾಯಕಿ ಹಾಜರಿರುವುದನ್ನು ಪರಿಶೀಲಿಸಿ ಮಕ್ಕಳಿಗೆ ಹೊರಾಂಗಣ ಆಟದ ವ್ಯವಸ್ಥೆ, ಸಿಂಟೆಕ್ಸ್ನ ಅವಶ್ಯಕತೆಯನ್ನು ಮನಗಂಡರು ಹಾಜರಿದ್ದ ಸ್ಥಳೀಯರನ್ನು ಸಂದರ್ಶಿಸಿ ಅಂಗನವಾಡಿ ಕೇಂದ್ರದ ಚಟುವಟಿಕೆ ಬಗ್ಗೆ ಮಾಹಿತಿ ಪಡೆದರು.

ನಂತರ ಸುಧಾರಣಾ ಸಂಸ್ಥೆಯಾದ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿ ನೀಡಿ ಸಂಸ್ಥೆಯಲ್ಲಿ ವಾಸ್ತವ್ಯವಿರುವ 61 ನಿವಾಸಿನಿಯರನ್ನು ಸಂದರ್ಶಿಸಿ ಅವರು ತೊಡಗಿರುವ ಹುಣಿಸೆಹಣ್ಣು ಸಂಸ್ಕರಣಾ ಘಟಕ, ಅಗರಬತ್ತಿ ತಯಾರಿಕಾ ಘಟಕವನ್ನು ಪರಿಶೀಲಿಸಿದರು. ಮಹಿಳೆಯರನ್ನು ಸಂದರ್ಶಿಸಿ ಅವರ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದರು. ಸಂಸ್ಥೆಯ ನಿವಾಸಿನಿಯರನ್ನು ಪೂರ್ಣ ಪ್ರಮಾಣದಲ್ಲಿ ತೋಟಗಾರಿಕೆ, ಲೈಬ್ರರಿ, ಹೊರಾಂಗಣ ಚಟುವಟಿಕೆ, ಆರೋಗ್ಯಕ್ಕಾಗಿ ಪ್ರಾಣಯಾಮ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿ ಪ್ರೀತಿಯಿಂದ ವ್ಯವಹರಿಸಲು ಸಿಬ್ಬಂದಿಗಳಿಗೆ ಕರೆ ನೀಡಿದರು. ಸಂಸ್ಥೆಯಲ್ಲಿ ನಿವಾಸಿನಿಯರ ಸಂಖ್ಯೆಗನುಗುಣವಾಗಿ ಅಕ್ಕಿ ಸರಬರಾಜು ಬಗ್ಗೆ ಕ್ರಮವಾಗಬೇಕಾಗಿರುವ ಕುರಿತು ಸಚಿವರು ಮನಗಂಡರು.

ಸಚಿವರ ಭೇಟಿಯಲ್ಲಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಮತ್ತಿತರ ಇಲಾಖಾಧಿಕಾರಿಗಳು ಹಾಜರಿದ್ದರು.


Spread the love

Exit mobile version