Home Mangalorean News Kannada News ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ : ಯಶ್ಪಾಲ್ ಸುವರ್ಣ

ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ : ಯಶ್ಪಾಲ್ ಸುವರ್ಣ

Spread the love

ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ ಯಾಗಲಿ : ಯಶ್ಪಾಲ್ ಸುವರ್ಣ

ಉಡುಪಿ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 93% ಅಂಕಗಳಿಸಿದ ಉಡುಪಿ ತಾಲೂಕಿನ ಹಿರಿಯಡ್ಕ ಬೊಮ್ಮಾರಬೆಟ್ಟು ಗ್ರಾಮದ ವಿದ್ಯಾರ್ಥಿನಿ ಕುಮಾರಿ ರಕ್ಷಾ ನಾಯಕ್ ರನ್ನು ಅವರ ನಿವಾಸದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಎ ಸುವರ್ಣ ರೂ. 25,000 ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಅಭಿನಂದಿಸಿದರು.

ಬಾಲ್ಯದಿಂದಲೇ ಬಲಗೈ ಮತ್ತು ಬಲಗಾಲಿನ ಸ್ವಾಧೀನವಿಲ್ಲದೆ ಎಡಗೈ ಮೂಲಕ ಪರೀಕ್ಷೆ ಬರೆದು ,ಅಂಗವೈಕಲ್ಯ ತೆಯನ್ನು ಮೆಟ್ಟಿನಿಂತು ಸಾಧನೆ ಮಾಡುವ ಮೂಲಕ , ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಬೀತು ಪಡಿಸಿದ್ದೀರಿ, ತಮ್ಮ ಈ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಹಾಗೂ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಯಶ್ ಪಾಲ್ ಸುವರ್ಣ ಶುಭ ಹಾರೈಸಿದರು.

ರಕ್ಷಾ ನಾಯಕ್ ರವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ವೈಯುಕ್ತಿಕ ನೆಲೆಯಲ್ಲಿ ರೂ. 25,000 ಪ್ರೋತ್ಸಾಹ ಧನದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಧ್ಯಾ ಕಾಮತ್, ಜಿಲ್ಲಾ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀ ಅಕ್ಷಿತ್ ಶೆಟ್ಟಿ ಹೆರ್ಗ, ಹಿಂದೂ ಯುವಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶೇಖರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version