Home Mangalorean News Kannada News ಅಂಜನೇಯನ ಬದುಕು  ಸಾಧನೆಗೆ ಪ್ರೇರಣೆಯಾಗಿದೆ; ವೀರಮಾರುತಿ ವ್ಯಾಯಾಮ ಶಾಲೆ ಅಷ್ಟಮ  ಪ್ರತಿಷ್ಠಾ ವರ್ಧಂತಿಯಲ್ಲಿ ಪ್ರಮೋದ್ 

ಅಂಜನೇಯನ ಬದುಕು  ಸಾಧನೆಗೆ ಪ್ರೇರಣೆಯಾಗಿದೆ; ವೀರಮಾರುತಿ ವ್ಯಾಯಾಮ ಶಾಲೆ ಅಷ್ಟಮ  ಪ್ರತಿಷ್ಠಾ ವರ್ಧಂತಿಯಲ್ಲಿ ಪ್ರಮೋದ್ 

Spread the love

ಅಂಜನೇಯನ ಬದುಕು  ಸಾಧನೆಗೆ ಪ್ರೇರಣೆಯಾಗಿದೆ; ವೀರಮಾರುತಿ ವ್ಯಾಯಾಮ ಶಾಲೆ ಅಷ್ಟಮ  ಪ್ರತಿಷ್ಠಾ ವರ್ಧಂತಿಯಲ್ಲಿ ಪ್ರಮೋದ್ 

ಉಡುಪಿ: ಅಂಜನೇಯನ ಬದುಕು ನಮ್ಮ ಸಾಧನೆಗೆ ಪ್ರೇರಣೆಯಾಗಿದೆ. ನಮ್ಮೆಲ್ಲರ ಬದುಕಿಗೆ ಸ್ಪೂರ್ತಿಯನ್ನು ನೀಡುವ ಹನುಮ ಜೀವಂತನಾಗಿದ್ದಾನೆ. ಆತನ ಅನುಗ್ರಹ ನಾಡಿನ ಎಲ್ಲರಿಗೂ ಲಭಿಸುವಂತಾಗಲಿ ಎಂದು ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಶನಿವಾರ ಕೆಳಾರ್ಕಳಬೆಟ್ಟು ವಿಷ್ಣುಮೂರ್ತಿ ನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಷ್ಟಮ ವರ್ಷದ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ್ ಭಟ್ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಕೆಳಾರ್ಕಳಬೆಟ್ಟು ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ವಹಿಸಿ ಮಾತನಾಡಿದ ಕಳೆದ 8 ವರ್ಷಗಳಿಂದ ಸಂಘಟಿತ ಮನೋಭಾವನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮದ ಜೊತೆಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ವ್ಯಾಯಾಮ ಶಾಲೆ ಇತರರಿಗೆ ಮಾದರಿಯಾಗಿ ಸೇವೆಯನ್ನು ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಸಮಾಜಸೇವೆಗೆ ಬದ್ಧವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿಗಳಾದ ಶೇಖರ್ ಜಿ.ಕೋಟ್ಯಾನ್, ಸತೀಶ್ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ವಸಂತ್ ನಾಯಕ್, ದಕ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಉಪಸ್ಥಿತರಿದ್ದರು.

ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಪ್ರತಿಭೆಗಳಾದ ಅನಿಮಿಷ, ಶ್ರದ್ಧಾ, ವಿಘ್ನೇಶ್, ಪ್ರಜ್ವಲ್ ಅವರುಗಳನ್ನು ವ್ಯಾಯಾಮ ಶಾಲೆಯ ವತಿಯಿಂದ ಸಮ್ಮಾನಿಸಲಾಯಿತು.

ಪ್ರಖ್ಯಾತ್ ಶೆಟ್ಟಿ ಸ್ವಾಗತಿಸದರು. ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಕೊಜಕೊಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜೇತ ಶೆಟ್ಟಿ ಕಾರ್ಯಕ್ರಮ ನಿರೂಫಿಸಿ ಉಪಾಧ್ಯಕ್ಷ ಅನಿಲ್ ಪಾಲನ್ ವಂದಿಸಿದರು.


Spread the love

Exit mobile version