ಅಖಿಲ ತೇಜಸ್ವಿ ಆರ್ ಇವರಿಗೆ ಪಿಎಚ್.ಡಿ. ಪದವಿ
ಮಂಗಳೂರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ತೇಜಸ್ವಿ ಇವರು ಬೆಳ್ಳಿಪಾಡಿ ಡಾ. ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಮಂಡಿಸಿದ “ಫ್ರೇಮ್ವರ್ಕ್ ಆನ್ ಅಕ್ಸೆಲೆರೇಟಿಂಗ್ ಇಮೇಜ್ ಅನಾಲಿಸಿಸ್ ಥ್ರೂ ಡೀಪ್ ಲರ್ನಿಂಗ್ ಆಂಡ್ ನಾಲೆಜ್ ರೆಲಿಗೇಷನ್ ಯೂಸಿಂಗ್ ಗ್ರಾಫ್ ಡೇಟಾ ಸೈನ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಅಖಿಲ ತೇಜಸ್ವಿ ಇವರು ನಾಡೇಲು ದಿ| ರವಿ ಪೂಜಾರಿ ಹಾಗೂ ಕುಸುಮಾವತಿ ದಂಪತಿಯ ಸುಪುತ್ರಿ ಮತ್ತು ಪಾಡಿ ಪಿಲ್ಯ ಶರತ್ ಕುಮಾರ್ ಇವರ ಧರ್ಮಪತ್ನಿ.
