Home Mangalorean News Kannada News ಅಚ್ಲಾಡಿ: ಸನ್‍ಶೈನ್ ಗೆಳೆಯರ ಬಳಗ ವಾರ್ಷಿಕೋತ್ಸವ `ನಮ್ಮೂರ ಸಂಭ್ರಮ’

ಅಚ್ಲಾಡಿ: ಸನ್‍ಶೈನ್ ಗೆಳೆಯರ ಬಳಗ ವಾರ್ಷಿಕೋತ್ಸವ `ನಮ್ಮೂರ ಸಂಭ್ರಮ’

Spread the love

ಅಚ್ಲಾಡಿ: ಸನ್‍ಶೈನ್ ಗೆಳೆಯರ ಬಳಗ ವಾರ್ಷಿಕೋತ್ಸವ `ನಮ್ಮೂರ ಸಂಭ್ರಮ’

ಕೋಟ: ಸನ್‍ಶೈನ್ ಗಳೆಯರ ಬಳಗ ರಿ. ಕ್ರೀಡಾ ಸಂಘ ಅಚ್ಲಾಡಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮ `ನಮ್ಮೂರ ಸಂಭ್ರಮ’ವು ಅಗಲಿದ ಗೆಳೆಯ ದಿ|ರಾಜೇಶ ಶೆಟ್ಟಿ ಸ್ಮರಣಾರ್ಥವಾಗಿ ಎ.16ರಂದು ಅಚ್ಲಾಡಿ ಸನ್‍ಶೈನ್ ಕ್ರೀಡಾಂಗಣದಲ್ಲಿ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಂಘ ಸಂಸ್ಥೆಗಳು ಸಾಮಾಜಿಕವಾಗಿ ತಮನ್ನು ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ದುಡಿಯಬೇಕು ಹಾಗೂ ಆಡಳಿತ ವ್ಯವಸ್ಥೆಯ ಸರಿ-ತಪ್ಪುಗಳನ್ನು ತಿದ್ದುವ ಕಾರ್ಯ ಮಾಡಬೇಕು. ಸಾಮಾಜಿಕ ಅಭಿವೃದ್ದಿಗೆ ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಸನ್‍ಶೈನ್ ಗಳೆಯರ ಬಳಗ ಈ ಭಾಗದಲ್ಲಿ ಜನಪರವಾದ ಹಲವು ಕಾರ್ಯಗಳನ್ನು ಮಾಡಿ ಯಶಸ್ವಿಯಾಗಿದೆ ಎಂದರು.

ಪ್ರೇರಣೆಯ ಮಾತನಾಡಿದ ವಿಧ್ವಾನ ದಾಮೋದರ ಶರ್ಮ, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಸಂದರ್ಭ ಅಪವಾದಗಳು ಸಹಜ. ಆದರೆ ನಾವು ಸರಿದಾರಿಯಲ್ಲಿರುವಾಗ ಅಂತಹ ಕುಹಕಗಳಿಗೆ ಅಂಜದೆ ಮುನ್ನಡೆಯಾಗಬೇಕು . ಯುವಕರು ಸಮಾಜಕ್ಕೆ ಮಾದದರಿಯಾಗುವ ಕೆಲಸಗಳನ್ನು ಮಾಡಬೇಕು ಎಂದರು.
ಸನ್‍ಶೈನ್ ಗಳೆಯರ ಬಳಗದ ಅಧ್ಯಕ್ಷ ಕಿರಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ನಿವೃತ್ತ ಶಿಕ್ಷಕ ವಿ.ನಾರಾಯಣ ಶಟ್ಟಿ, ಮತ್ತು ನಿವೃತ್ತ ಮುಖ್ಯ ಶಿಕ್ಷಕ ಎ.ಸುರೇಂದ್ರ ಶಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು ಹಾಗೂ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸತೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳೇ ನಿರ್ಮಿಸಿದ ಚಿತ್ತಚಿಂಚಲ ಚಲನಚಿತ್ರವನ್ನು ಪರಿಚಯಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಜೈ ಗಣೇಶ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪ್ರಭು, ಚಿತ್ತ ಚಂಚಲ ಸಿನಿಮಾ ನಿರ್ದೇಶಕ ವೈ.ಕು ಸುಂದರ್ ಉಪಸ್ಥಿತರಿದ್ಧರು.

ವಸಂತ ಗಿಳಿಯಾರು ಕಾರ್ಯಕ್ರಮ ನಿರೂಪಿಸಿ, ಸಾಂಸ್ಕøತಿಕ ಕಾರ್ಯದರ್ಶಿ ಸುಶಾಂತ ಶೆಟ್ಟಿ ಅಚ್ಲಾಡಿ ಸ್ವಾಗತಿಸಿ, ರಾಜೇಶ ಅಚ್ಲಾಡಿ ಪ್ರಾಸ್ತಾವಿಕ ಮಾತನಾಡಿ, ವೆಂಕಟೇಶ ಶೆಣೈ ವಂದಿಸಿದರು.


Spread the love

Exit mobile version