Home Mangalorean News Kannada News ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆಕಾಶ ಭವನ ಶರಣ್ ಮೇಲೆ ಪೋಕ್ಸೊ ಕೇಸು ದಾಖಲು

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆಕಾಶ ಭವನ ಶರಣ್ ಮೇಲೆ ಪೋಕ್ಸೊ ಕೇಸು ದಾಖಲು

Spread the love

ಅಪ್ರಾಪ್ತೆಗೆ ಕಿರುಕುಳ ಆರೋಪದ ಮೇಲೆ ಆಕಾಶ ಭವನ ಶರಣ್ ಮೇಲೆ ಪೋಕ್ಸೊ ಕೇಸು ದಾಖಲು

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ನಡೆಸಿರುವ ಆರೋಪದ   ಮೇಲೆ ಆಕಾಶಭವನದ ಶರಣ್ ಎಂಬವರ ಮೇಲೆ ಪೋಕ್ಸೊ ಕೇಸು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಜನವರಿ 7 ರಂದು ಅಪ್ರಾಪ್ತ ಬಾಲಕಿಯ ಮನೆಯವರು ಕೇಸು ದಾಖಲಿಸಿದ್ದು, ಶರಣ್ ಬಾಲಕಿಯೊಂದಿಗೆ ಗೆಳೆತನ ಬೆಳೆಸಿ ಬಳಿಕ ಅತ್ಯಾಚಾರ  ಎಸಗಿದ್ದ ಪ್ರಸ್ತುತ ಬಾಲಕಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿಯ ಮನೆಯವರ ದೂರಿನಂತೆ ಪೊಲೀಸರು ಶರಣ್ ಮೇಲೆ ಪೋಕ್ಸೊ ಕೇಸು ದಾಖಲಿಸಿದ್ದು, ಆರೋಪಿ ಶರಣ್ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.


Spread the love

Exit mobile version