Home Mangalorean News Kannada News ಅಪ್ರಾಪ್ತ ಬಾಲಕಿಯ ಮೇಲೆ ಆತ್ಯಾಚಾರ – ಆರೋಪಿಯ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ ಆತ್ಯಾಚಾರ – ಆರೋಪಿಯ ಬಂಧನ

Spread the love

ಅಪ್ರಾಪ್ತ ಬಾಲಕಿಯ ಮೇಲೆ ಆತ್ಯಾಚಾರ – ಆರೋಪಿಯ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಉಳ್ಳಾಲ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದು, ಆತನ ವಿರುದ್ದ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ವಳಚ್ಚಿಲ್ ನಿವಾಸಿ ಲವಕುಮಾರ್ ಅಲಿಯಾಸ್ ಶ್ರವಣ್ ಎಂದು ಗುರುತಿಸಲಾ.ಗಿದೆ

ಆರೋಪಿ ತೊಕ್ಕೊಟ್ಟಿನ ಫಾಸ್ಟ್ ಫುಡ್ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಿದ್ದು, ಕ್ಯಾಂಟೀನ್ ಮಾಲಕಿಯ ಪುತ್ರಿಯನ್ನು ಅತ್ಯಾಚಾರಗೈದಿರುವುದಾಗಿ ಆರೋಪಿಸಲಾಗಿದ್ದು,. ಇದರಿಂದ ಸಂತ್ರಸ್ತೆ 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಈ ಕುರಿತಂತೆ ಬಾಲಕಿಯ ತಾಯಿ ಪೊಲೀಸ್ ದೂರು ನೀಡಿದ್ದಾರೆ.

ಸಂತ್ರಸ್ತೆ ಬಾಲಕಿಯ ತಾಯಿಗೆ ತೊಕ್ಕೊಟ್ಟು ಬಳಿ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ಕೆಲಸಕ್ಕೆ ದೂರದ ಪರಿಚಯವನಾಗಿದ್ದ ಲವಕುಮಾರ್ನನ್ನು ಸೇರಿಸಿದ್ದರು. ಈತ ರಾತ್ರಿ ವೇಳೆ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಈ ಸಂದರ್ಭ ಬಾಲಕಿಯ ಜೊತೆಗೆ ಸಲುಗೆ ಬೆಳೆಸಿಕೊಂಡು, ಆತ್ಮೀಯತೆಯನ್ನು ದುರ್ಬಳಕೆ ಮಾಡಿಕೊಂಡು ಆತ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love

Exit mobile version