Home Mangalorean News Kannada News ಅಲೆವೂರು ಗ್ರೂಪ್ ಅವಾರ್ಡ್‍ಗೆ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆ

ಅಲೆವೂರು ಗ್ರೂಪ್ ಅವಾರ್ಡ್‍ಗೆ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆ

Spread the love

ಅಲೆವೂರು ಗ್ರೂಪ್ ಅವಾರ್ಡ್‍ಗೆ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆ

ಉಡುಪಿ: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2017ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‍ಗೆ ಖ್ಯಾತ ಶಿಕ್ಷಣ ತಜ್ಞ ಹಾಗೂ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ ನಿರ್ದೇಶಕ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆಯಾಗಿದ್ದಾರೆ.

ಸುಮಾರು 8 ವರ್ಷಗಳ ಕಾಲ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜು ಪ್ರಾಂಶುಪಾಲರಾಗಿ, ಬಳಿಕ ಸುಮಾರು 28 ವರ್ಷಗಳ ಕಾಲ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್‍ನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಪ್ರೊ. ನೈನನ್, ದೇಶ – ವಿದೇಶಗಳಲ್ಲಿ ಜರುಗಿದ ಹಲವಾರು ಶೈಕ್ಷಣಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡು ವಿಷಯ ಮಂಡಿಸಿದ್ದಾರೆ. ಜೊತೆಗೆ `ಸೊಲಿಲೋಕ್ಸ್ ಆಫ್ ಎ ಪ್ರಿನ್ಸಿಪಲ್’ ಎಂಬ ಪುಸ್ತಕವನ್ನು ಎರಡು ವಿಭಾಗವಾಗಿ ಬರೆದಿದ್ದಾರೆ.

ಡಿಸೆಂಬರ್ 2ರಂದು ಶನಿವಾರ ಅಪರಾಹ್ನ 2.30ಕ್ಕೆ ನಡೆಯುವ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾದ್ಯಮ ಶಾಲೆಯ 13ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಕಾಪು ಶಾಸಕರಾಗಿರುವ ವಿನಯ ಕುಮಾರ್ ಸೊರಕೆ ಅವರು ಬೆಳ್ಳಿ ಫಲಕ ಸಹಿತ ಅಲೆವೂರು ಗ್ರೂಪ್ ಪ್ರಶಸ್ತಿ ಪ್ರದಾನ ಮಾಡಲಿರುವರು. ಉಡುಪಿ ಜಿಲ್ಲಾ ಪಂಚಾಯತ್‍ನ ಮುಖ್ಯ ಯೋಜನಾಧಿಕಾರಿ ಎ. ಶ್ರೀನಿವಾಸ್ ರಾವ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವರು ಎಂದು ಅಲೆವೂರು ಗ್ರೂಪ್ ಅಧ್ಯಕ್ಷ ಎ. ಗಣಪತಿ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಪಿ. ರಬೀಂದ್ರ ನಾಯಕ್, ಮುರಾರಿ ಬಲ್ಲಾಳ್ (ಮರಣೋತ್ತರ), ರಮೇಶ್ ರಾವ್, ಡಾ. ರಮಾನಂದ ಭಟ್ (ಮರಣೋತ್ತರ), ಡಾ. ಯು.ಎಮ್. ವೈದ್ಯ, ಡಾ. ಮೋಹನ್ ಆಳ್ವಾ, ಶಿರ್ತಾಡಿ ವಿಲಿಯಂ ಪಿಂಟೊ, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರತಾಪ್ ಕುಮಾರ್, ಪ್ರೊ. ಎಮ್.ಡಿ. ನಂಜುಂಡ, ಡಾ. ಪಿ.ವಿ. ಭಂಡಾರಿ, ಡಾ. ಎನ್. ಎ. ಮಧ್ಯಸ್ಥ, ಎ. ಈಶ್ವರಯ್ಯ, ಡಾ. ವೈ.ಎನ್. ಶೆಟ್ಟಿ ಹಾಗೂ ಪ್ರಹ್ಲಾದ ಆಚಾರ್ಯ ಅವರಿಗೆ ಅಲೆವೂರು ಗ್ರೂಪ್ ಅವಾರ್ಡ್ ನೀಡಿ ಗೌರವಿಸಲಾಗಿತ್ತು.

 


Spread the love

Exit mobile version