Home Mangalorean News Kannada News ಅಲೆವೂರು ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಕ್ರಿಕೆಟ್ ಪಂದ್ಯಾಟ

ಅಲೆವೂರು ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಕ್ರಿಕೆಟ್ ಪಂದ್ಯಾಟ

Spread the love

ಅಲೆವೂರು ನೆಹರು ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಶನ್ ವತಿಯಿಂದ ಕ್ರಿಕೆಟ್ ಪಂದ್ಯಾಟ

ಉಡುಪಿ: ನೆಹರು ಸ್ಪೋರ್ಟ್ಸ್ & ಕಲ್ಚರಲ್ ಆಸೋಸಿಯೇಶನ್ (ರಿ) ಅಲೆವೂರು ಇದರ 28ನೇ ವರ್ಷದ ಶ್ಯಾಮ ಸುಂದರಿ ಕ್ರಿಕೆಟ್ ಪಂದ್ಯಾಟ ದ ಉದ್ಘಾಟನಾ ಸಮಾರಂಭ ಅಲೆವೂರು ನೆಹರು ಕ್ರೀಡಾಂಗಣದಲ್ಲಿ ಜರಗಿತು.

ಕಾರ್ಯಕ್ರಮದ‌ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಮನೋಜ್ ಪ್ರಭು ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಡುಪಿಯ ವಕೀಲ ಹಂಝರದ ಹೆಜಮಾಡಿ ಸ್ವಾಮಿ ವಿವೇಕಾನಂದರು ಹೇಳಿದಂತೆ ಮಾನವೀಯ ಅಂತಃಕರಣದ ಯುವ ಶಕ್ತಿಯಿಂದ ರಾಷ್ಟ್ರನಿರ್ಮಾಣ ಸಾಧ್ಯವಾಗುತ್ತದೆ. ಹಾಗಾಗಿ ಯುವಕರನ್ನು ಸಂಘಟಿತಗೊಳಿಸಿ ಅವರನ್ನು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಲೆವೂರು ನೆಹರೂ ನ್ಪೋರ್ಟ್ಸ್ ಕ್ಲಬ್‌ ಮಾದರಿಯಾಗಿದೆ. ಸಂಘಟನೆಗಳು ಸೀಮಿತ ಕಾರ್ಯ ನಿರ್ವಹಣೆಗೆ ಮೀಸಲಾಗದೆ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯಬೇಕು. ಎಂದು ಅವರು ಹೇಳಿದರು.

ಅಸೋಸಿಯೇಶನ್‌ ಅಧ್ಯಕ್ಷ ಸತೀಶ್‌ ಕುಮಾರ್‌ ಅವರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಕಾರ್ಯದರ್ಶಿ ಬಿಪಿ ಮಂಜುನಾಥ, ಕ್ರಿಕೆಟ್ ತಂಡದ ಕಪ್ತಾನ ನಿತ್ಯಾನಂದ ಅಂಚನ್‌, ಖಜಾಂಚಿ ದಯಾನಂದ ಅಂಚನ್‌ ಉಪಸ್ಥಿತರಿದ್ದರು.

ಅಸೋಸಿಯೇಶನ್‌ ಗೌರವಾಧ್ಯಕ್ಷ ಅಲೆವೂರು ಹರೀಶ್‌ ಕಿಣಿ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಗುರುರಾಜ್‌ ಸಾಮಗ ಅವರು ನಿರೂಪಿಸಿದರು. ಕಾರ್ಯದರ್ಶಿ ಪ್ರತಾಪ್‌ ಕುಂದರ್‌ ವಂದನಾರ್ಪಣೆಗೈದರು. 16 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡವು.


Spread the love

Exit mobile version