ಅ. 23-25 ಉಡುಪಿಯಲ್ಲಿ ಕರ್ನಾಟಕ ರಾಜ್ಯ ಕಿರಿಯರ ಮತ್ತು 23 ವಯೋಮಿತಿ ಕ್ರೀಡಾಕೂಟ
ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯದ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಿರಿಯರ ಮತ್ತು 23 ವಯೋಮಿತಿ ಕ್ರೀಡಾಕೂಟವು ದಿನಾಂಕ 23 ಆಗಸ್ಟ್ ರಿಂದ 25 ಆಗಸ್ಟ್ 2025 ರವರೆಗೆ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕರು ಹಾಗೂ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ಈ ಕ್ರೀಡಾಕೂಟವು ಪುದುಚೇರಿಯಲ್ಲಿ ನಡೆಯುವ ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಣೆ ಮತ್ತು ಭುವನೇಶ್ವರ್ ನಡೆಯುವ ರಾಷ್ಟ್ರೀಯ ಕಿರಿಯರ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಆಯ್ಕೆಯು ಈ ಕ್ರೀಡಾಕೂಟದಲ್ಲಿ ನಡೆಯಲಿಕ್ಕಿದೆ. ಕರ್ನಾಟಕ ರಾಜ್ಯದ ಅಥ್ಲೆಟಿಗಳ ಭವಿಷ್ಯದ ದೃಷ್ಟಿಯಿಂದ ಈ ಕ್ರೀಡಾಕೂಟವು ಬಹಳ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. 2025-26ನೇ ಕ್ರೀಡಾ ವರ್ಷದ ಪ್ರಥಮ ಇ ಕ್ರೀಡಾಕೂಟವಾಗಿರುತ್ತದೆ. ಮೂರು ದಿವಸಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 10 ವಿಭಾಗಗಳಲ್ಲಿ 150 ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಈ ಕ್ರೀಡಾಕೂಟವು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ನಿಯಮದ ಪ್ರಕಾರ ನಡೆಯಲಿದೆ ಮತ್ತು ಫೋಟೋ Finish ಸಿಸ್ಟಮ್ ಕೂಡಾ ಅಳವಡಿಸಲಾಗುವುದು.
ಈ ಕ್ರೀಡಾಕೂಟಕ್ಕೆ ಮುಖ್ಯ ಪ್ರಾಯೋಜಕರಾಗಿ ಸಹಕರಿಸುತ್ತಿರುವವರು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದವರು ಹಾಗೂ ಸಹ ಪ್ರಯೋಜಕರಾಗಿ ಕೊಚ್ಚಿನ್ ಶಿಪ್ ಯಾರ್ಡ್, ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್ ಮಣಿಪಾಲ್, ಬ್ಯಾಂಕ್ ಆಫ್ ಬರೋಡ ಹಾಗೂ NEB ಸ್ಪೋರ್ಟ್ಸ್ ಬೆಂಗಳೂರು ಇವರು ಸಹಕರಿಸಲಿದ್ದಾರೆ.
ಕ್ರೀಡಾಕೂಟದ ಉದ್ಘಾಟನೆಯನ್ನು ಗೃಹ ಸಚಿವರು ಹಾಗೂ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರು ನೆರವೇರಿಸಲಿದ್ದಾರೆ ಹಾಗೂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಳ್ಳಾಲ್ ರವರು, ಪಥ ಸಂಚಲನದ ವಂದನೆ ಸ್ವೀಕಾರವನ್ನು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಳರ್ ಅವರು ಅದೇ ರೀತಿ ಧ್ವಜಾರೋಹಣವನ್ನು ಶಾಸಕರಾದ ಯಶಪಾಲ್ ಎ. ಸುವರ್ಣ ರವರು ನೆರವೇರಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಚೇರ್ ಮೆನ್ ಡಾ. ಎಂ. ಮೋಹನ್ ಆಳ್ವ, ನಿಟ್ಟೆ ವಿದ್ಯಾ ಸಂಸ್ಥೆಯ ಸಹ ಕುಲಾಧಿಪತಿಗಳಾದ ಎನ್. ವಿಶಾಲ್ ಹೆಗ್ಡೆ ಹಾಗೂ ಮಾಜಿ ಸಚಿವರುಗಳಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಅಭಯ್ ಚಂದ್ರ ಜೈನ್, ಸುನಿಲ್ ಕುಮಾರ್ ವಿ., NEB, ಸ್ಪೋರ್ಟ್ಸ್ನ ಆಡಳಿತ ನಿರ್ದೇಶಕರಾದಂತಹ ನಾಗರಾಜ ಅಡಿಗ, ಶ್ರೀ ಕೆ.ಎಂ. ಶೆಟ್ಟಿ ವಿ.ಕೆ. ಗ್ರೂಪ್ ಆಡಳಿತ ನಿರ್ದೇಶಕರು, ಶ್ರೀ ಶಂಕರ್ ನಟರಾಜ್ ಹಣಕಾಸು ಅಧಿಕಾರಿಗಳು ಕೊಚ್ಚಿನ್ ಶಿಪ್ ಯಾರ್ಡ್, ಶ್ರೀ ಪಭಿತ್ರಾ ಕುಮಾರ್ ದಾಸ್ ಎ.ಜಿ.ಎಂ. ಕೆನರಾ ಬ್ಯಾಂಕ್ ಮಣಿಪಾಲ್, ಶ್ರೀ ದಿನಕರ್ ಹೇರೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಮಾಜಿ ಸಚಿವರಾದ ಶ್ರೀ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದಂತಹ ಶ್ರೀ ಮಂಜುನಾಥ ಭಂಡಾರಿ ಹಾಗೂ ಶಾಸಕರುಗಳಾದ ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಶ್ರೀ ಕಿರಣ್ ಕೊಡ್ಲಿ ಶ್ರೀ ಗುರುರಾಜ್ ಗಂಟಿಹೊಳೆ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್ ಕಾಂಚನ್ ಹಾಗೂ ಜಿಲ್ಲಾಧಿಕಾರಿಗಳಾದ ಸ್ವರೂಪಾ ಟಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಧಿಕಾರಿಯಾದ ಶ್ರೀ ಪ್ರತೀಕ್ ಬಾಯಲ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ ಶಂಕರ್ ಹಾಗೂ ಉದ್ಯಮಿಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ, ಶ್ರೀ ಪ್ರಸಾದ್ ರಾಜ್ ಕಾಂಚನ್, ಅಂತರ್ ರಾಷ್ಟ್ರೀಯ ಕ್ರೀಡಾಪಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಆಶಾ ಎಂ.ಕೆ. ಇವರುಗಳು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ ರವರು, ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ., ಮಾಹೆಯ ಸಹ ಉಪಕುಲಪತಿಯಾದ ಡಾ. ಶರತ್ ರಾವ್, ಅಜೆಕಾರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ನಿರಂಜನ್ ಚಿಕ್ಲಾಂಕರ್, ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಸಿ.ಎ. ರಾಜವೇಲು, ಕೊಚ್ಚಿನ್ ಶಿಪ್ ಯಾರ್ಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಹರಿ ಕುಮಾರ್ ಹಾಗೂ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಗಂಗಾಧರ್ ಮಾಹೆ ಮಣಿಪಾಲ್, ಕ್ರೀಡಾ ಕಾರ್ಯದರ್ಶಿ ಡಾ. ವಿನೋದ್ ನಾಯಕ್, ಸಹ ಕಾರ್ಯದರ್ಶಿ ಎಂ.ಆರ್. ಕುಮಾರ್, ಡಾ. ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನಸೇವಾ ಕ್ರೀಡಾ ಇಲಾಖೆ ಇವರುಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್ ಠಾಕೂರ್, (ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ಸಂಘಟನಾ ಕಾರ್ಯದರ್ಶಿ ಕ್ರೀಡಾಕೂಟದ ಸಂಘಟನಾ ಸಮಿತಿ), ಹರಿಪ್ರಸಾದ್ ರೈ, (ಅಧ್ಯಕ್ಷರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕಾರ್ಯಾಧ್ಯಕ್ಷರು ಸಂಘಟನಾ ಸಮಿತಿ) ಚಂದ್ರಶೇಖರ್ ಹೆಗ್ಡೆ, (ಉಪಾಧ್ಯಕ್ಷರು, ಕ್ರೀಡಾಕೂಟದ ಸಂಘನಾ ಸಮಿತಿ), ದಿನೇಶ್ ಕುಮಾರ್ ಎ., ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಸಂಘಟನಾ ಸಮಿತಿ, ನಾರಾಯಣ ಪ್ರಭು, ಖಜಾಂಚಿಗಳು ಹಾಗೂ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಹಾಗೂ ಸಂಘಟನಾ ಸಮಿತಿ, ಡಾ. ರಾಮಚಂದ್ರ ಪಾಟ್ಕರ್, ತಾಂತ್ರಿಕ ಸಮಿತಿ ಮುಖ್ಯಸ್ಥರು, ಜಿಲ್ಲಾ ಅಥ್ಲೆಟಿಕ್ ಸಂಸ್ಥೆ, ಡಾ. ರಾಮಚಂದ್ರಪ್ಪ ತಾಂತ್ರಿಕ ಸಮಿತಿಯ ಮುಖ್ಯಸ್ಥರು ಜಿಲ್ಲಾಧ್ಯಕ್ಷ, ಈ ಸುದರ್ಶನ ನಾಯಕ್ ಜತೆ ಕಾರ್ಯದರ್ಶಿಗಳು ಜಿಲ್ಲಾಧ್ಯಕ್ಷ ಸಂಸ್ಥೆ, ಲಚ್ಚೇಂದ್ರ, ಜೊತೆ ಕಾರ್ಯದರ್ಶಿಗಳು, ಸಂಘಟನಾ ಸಂಸ್ಥೆ ಉಪಸ್ಥಿತರಿದ್ದರು