Home Mangalorean News Kannada News ಆರೋಗ್ಯ ಇಲಾಖೆಯಲ್ಲಿ ವ್ಯೆದ್ಯರ ಕೊರತೆಯಾಗದಂತೆ ಕ್ರಮ- ಕಂದಾಯ ಸಚಿವ ಆರ್. ಅಶೋಕ್

ಆರೋಗ್ಯ ಇಲಾಖೆಯಲ್ಲಿ ವ್ಯೆದ್ಯರ ಕೊರತೆಯಾಗದಂತೆ ಕ್ರಮ- ಕಂದಾಯ ಸಚಿವ ಆರ್. ಅಶೋಕ್

Spread the love

ಆರೋಗ್ಯ ಇಲಾಖೆಯಲ್ಲಿ ವ್ಯೆದ್ಯರ ಕೊರತೆಯಾಗದಂತೆ ಕ್ರಮ- ಕಂದಾಯ ಸಚಿವ ಆರ್. ಅಶೋಕ್

ಉಡುಪಿ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವೈದ್ಯರ ಕೊರತೆಯಾಗದಂತೆ , ನೇಮಕಾತಿಗಳನ್ನು ಮಾಡುವ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ ಎಂದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಅವರು ಭಾನುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕ ಇವರ ಸಹಯೋಗದಲ್ಲಿ ಮುನಿಯಾಲು ನಲ್ಲಿ , 1.78 ಕೋಟಿ ವೆಚ್ಚದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಎಲ್ಲಡೆ ಪರಿಸರ ಕಲುಷಿತಗೊಳ್ಳುತ್ತಿರುವುದರಿಂದ ವಿವಿಧ ರೀತಿಯ ಹೊಸ ರೋಗಗಳು ಕಂಡು ಬರುತ್ತಿದ್ದು, ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ರೋಗಗಳು ಬಾರದಂತೆ ಯಾವ ರೀತಿಯ ಮುಂಜಾಗ್ರತಾ ಕ್ರಮ ವಹಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಅರಿವು ಮೂಡಿಸಬೇಕು ಎಂದು ಸಚಿವರು ತಿಳಿಸಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಕಳ ತಾ.ಪಂ. ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ಪ್ರತಾಪ್ ಹೆಗ್ಡೆ ಮಾರಾಳಿ, ತಾ.ಪಂ. ಸದಸ್ಯೆ ಸುಲತಾ ನಾಯ್ಕ್, ಜಿಲ್ಲಾಧಿಕಾರಿ ಜಿ.ಜಗದೀಶ್ , ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಕಾರ್ಕಳ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ. ಮೇಜರ್ ಹರ್ಷ, ಕಾರ್ಕಳ ತಹಸೀಲ್ದಾರ್ ಪುರಂದರ ಹೆಗಡೆ, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಸ್ವಾಗತಿಸಿದರು. ಡಾ. ಸೌಮ್ಯ ವಂದಿಸಿದರು.


Spread the love

Exit mobile version