Home Mangalorean News Kannada News ಆರೋಪಗಳನ್ನು ಕಚೇರಿಗೆ ಲಿಖಿತವಾಗಿ ಸಲ್ಲಿಸಿದ್ರೆ ಚರ್ಚೆಗೆ ನಾನೂ ಸಿದ್ಧ : ಯು.ಟಿ ಖಾದರ್

ಆರೋಪಗಳನ್ನು ಕಚೇರಿಗೆ ಲಿಖಿತವಾಗಿ ಸಲ್ಲಿಸಿದ್ರೆ ಚರ್ಚೆಗೆ ನಾನೂ ಸಿದ್ಧ : ಯು.ಟಿ ಖಾದರ್

Spread the love

ಆರೋಪಗಳನ್ನು ಕಚೇರಿಗೆ ಲಿಖಿತವಾಗಿ ಸಲ್ಲಿಸಿದ್ರೆ ಚರ್ಚೆಗೆ ನಾನೂ ಸಿದ್ಧ : ಯು.ಟಿ ಖಾದರ್

ಮಂಗಳೂರು: ಸ್ಪೀಕರ್ ಕಚೇರಿಯಲ್ಲಿ ಅವ್ಯವಹಾರ ಆಗಿದೆ ಎಂದು ಹೇಳುವವರು ಆರೋಪಗಳನ್ನು ಕಚೇರಿಗೆ ಲಿಖಿತವಾಗಿ ಸಲ್ಲಿಸಿದ್ರೆ ಚರ್ಚೆಗೆ ನಾನೂ ಸಿದ್ಧಎಂದು ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಹೇಳಿದರು

ಅವರು ಬುಧವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನೂ ಕೂಡ ವಿಚಾರವನ್ನು ಮಾಧ್ಯಮಗಳಿಂದ ತಿಳಿದುಕೊಂಡಿದ್ದೆನೆ. ಜಗತ್ತಿನಲ್ಲಿ ಎಲ್ಲದಕ್ಕೂ ಮದ್ದು ಇದೆ ಆದರೆ ಅಸೂಯೆಗೆ ಮದ್ದಿಲ್ಲ. ನಾವು ಹೊಸದಾಗಿ ಮನೆ, ಕಟ್ಟಡ ಕಟ್ಟುವಾಗ ಯಾರದ್ದೂ ದೃಷ್ಟಿ ಬೀಳಬಾರದು ಎಂಬ ನಿಟ್ಟಿನಲ್ಲಿ ದೃಷ್ಟಿಬೊಂಬೆಯನ್ನು ಇಡುತ್ತೇವೆ. ಅಂತೆಯೇ ಕರ್ನಾಟಕದ ವಿಧಾನಸಭೆ ಕೇವಲ ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ ಅದಕ್ಕೆ ದೃಷ್ಟಿಬೀಳಬಾರದು ಎಂದು ನಮ್ಮ ಮಾಜಿ ಸ್ಪೀಕರ್ ಗಳು ಮಾಡುವ ಆರೋಪಗಳು ದೃಷ್ಟಿ ಬೊಂಬೆಯ ರೀತಿಯಲ್ಲಿ ಎಂದು ಹೇಳಬಯಸುತ್ತೇನೆ.

ಅಭಿವೃದ್ಧಿ ನಿರಂತರವಾಗಿದ್ದು ಅದನ್ನು ಹಂತಹಂತವಾಗಿ ಮಾಡುತ್ತಾ ಇರುತ್ತೇನೆ. ಯಾರಿಗಾದರೂ ಅದರ ಬಗ್ಗೆ ಸಂಶಯ ಸಂದೇಹಗಳು ಇದ್ದಲ್ಲಿ ನಾಳೆ ನಾನು ನನ್ನ ಕಚೇರಿಯಲ್ಲಿ ಇರುತ್ತೇನೆ. ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಲಿಖಿತರೂಪದಲ್ಲಿ ನೀಡಿದ್ದಲ್ಲಿ ಅದಕ್ಕೆ ಸೂಕ್ತವಾದ ಚರ್ಚೆಗೆ ನಾನು ಸಿದ್ದನಿದ್ದೇನೆ.

ಸಂಸದರು ಶಾಸಕರಾದವರು ರಾಜಕೀಯವಾಗಿ ಮಾತನಾಡುತ್ತಾರೆ ಅವರಂತೆ ನಾನು ಸಂಸದೀಯ ಸ್ಥಾನದಲ್ಲಿ ಕುಳಿತುಕೊಂಡು ಅವರಂತೆ ಹೇಳಿಕೆ ಕೊಡಲು ಸಾಧ್ಯವಿಲ್ಲ. ನಮ್ಮ ಶಾಸಕರಿಗೆ ಯಾವುದೆಲ್ಲಾ ಸವಲತ್ತುಗಳನ್ನು ನೀಡಲು ಸಾಧ್ಯವೋ ಅದನ್ನು ನೀಡುವುದು ನನ್ನ ಜವಾಬ್ದಾರಿ. ಮುಂದೇಯೂ ಕೂಡ ಅದನ್ನು ನಾನು ಮಾಡುತ್ತೇನೆ ಎಂದರು.


Spread the love

Exit mobile version