Home Mangalorean News Kannada News ಆರ್ ಸಿ ಬಿ ಅಭಿಮಾನಿಗಳ ದುರಂತ ಸಾವಿಗೆ ಯಾರನ್ನು ಹೊಣೆ ಮಾಡಿ ಗಡೀಪಾರು ಮಾಡುತ್ತೀರಿ ಸಿದ್ದರಾಮಯ್ಯ...

ಆರ್ ಸಿ ಬಿ ಅಭಿಮಾನಿಗಳ ದುರಂತ ಸಾವಿಗೆ ಯಾರನ್ನು ಹೊಣೆ ಮಾಡಿ ಗಡೀಪಾರು ಮಾಡುತ್ತೀರಿ ಸಿದ್ದರಾಮಯ್ಯ ನವರೇ ? : ಯಶ್ಪಾಲ್ ಸುವರ್ಣ

Spread the love

ಆರ್ ಸಿ ಬಿ ಅಭಿಮಾನಿಗಳ ದುರಂತ ಸಾವಿಗೆ ಯಾರನ್ನು ಹೊಣೆ ಮಾಡಿ ಗಡೀಪಾರು ಮಾಡುತ್ತೀರಿ ಸಿದ್ದರಾಮಯ್ಯ ನವರೇ ? : ಯಶ್ಪಾಲ್ ಸುವರ್ಣ

ಉಡುಪಿ: ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಮಾವಧಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲದೆ ಕಾಲ್ತುಳಿತದಿಂದ ಸಾವಿಗೀಡಾದ 11 ಮಂದಿ ಅಮಾಯಕ ಆರ್ ಸಿ ಬಿ ಅಭಿಮಾನಿಗಳ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರನ್ನು ಗಡೀಪಾರು ಮಾಡುತ್ತೀರಿ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಪೂರ್ವ ತಯಾರಿ ಇಲ್ಲದೇ ಸಾವಿರಾರು ಮಂದಿ ಸೇರುವ ಮಾಹಿತಿ ಇದ್ದರೂ ಕನಿಷ್ಟ ಒಂದು ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಡದೇ ಅಮಾಯಕ ಕ್ರೀಡಾಭಿಮಾನಿಗಳ ಸಾವಿನ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು.

ಆರ್ ಸಿ ಬಿ ತಂಡದ ಗೆಲುವಿನ ವಿಜಯೋತ್ಸವವನ್ನು ಸೂತಕವಾಗಿ ಮಾಡಿ ಜನಸಾಮಾನ್ಯರ ಪ್ರಾಣದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ ವಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

Exit mobile version