Home Mangalorean News Kannada News ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ

ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ

Spread the love

ಆಳ್ವಾಸ್ ತುಳು ಸಂಘದಿಂದ ವಿಶೇಷ ಉಪನ್ಯಾಸ

ಮೂಡುಬಿದಿರೆ: ತುಳು ಸಂಸ್ಕøತಿ, ಭಾಷೆ, ಆಚಾರ-ವಿಚಾರ, ಊಟೋಪಾಚಾರ, ಉಡುಗೆ-ತೊಡುಗೆ, ಆಟೋಟಗಳು ಇದರಲ್ಲಿ ಭಾಷೆ ಅಡಗಿದೆ ಅದ್ದರಿಂದ ಈ ಭಾಷೆಯ ಸಂಸ್ಕøತಿಯನ್ನು ಉಳಿಸಿ ಮುಂದೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಗಣೇಶ್ ಅಮೀನ್ ಸಂಕಮಾರು ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್‍ನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕರಾವಳಿ ಭಾಗದ ತಿಂಡಿ-ತಿನಸುಗಳು ವಿದೇಶದಲ್ಲಿ ಪ್ರಾಮುಖ್ಯತೆಯನ್ನು ಪಡೆಯಲು ನಮ್ಮ ಸಂಸ್ಕøತಿಯೇ ಕಾರಣ. ವಿದ್ಯಾರ್ಥಿಗಳು ಎಲ್ಲೆ ಉದ್ಯೋಗ ದೊರೆತರು, ಯಾವ ರಷ್ಟ್ರಾದಲ್ಲಿದ್ದರು ನಮ್ಮ ನಾಡಿನ ಸಂಸ್ಕøತಿ, ಆಚಾರ-ವಿಚಾರ, ಹಿರಿಯನ್ನು ಮರೆಯಬಾರದು ಎಂದರು.

ಪ್ರಾಧ್ಯಾಪಕ ಕೆ.ವಿ ಸುರೇಶ್, ತುಳು ಫೋರಮ್‍ನ ಸಂಯೋಜಕ ಡಾ. ನಾಗೇಂದ್ರ ಉಪಸ್ಥಿತರಿದ್ದರು. ಐಶ್ವರ್ಯ ಕೋಟ್ಯಾನ್ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿ, ಧವಳಾ ವಂದಿಸಿದರು.


Spread the love

Exit mobile version