Home Mangalorean News Kannada News ಆಳ ಸಮುದ್ರ ಮೀನುಗಾರಿಕೆ ಆರಂಭ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟುಗಳು

ಆಳ ಸಮುದ್ರ ಮೀನುಗಾರಿಕೆ ಆರಂಭ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟುಗಳು

Spread the love

ಆಳ ಸಮುದ್ರ ಮೀನುಗಾರಿಕೆ ಆರಂಭ: ಮೀನುಗಾರಿಕೆಗೆ ತೆರಳಿದ ಟ್ರಾಲ್ ಬೋಟುಗಳು

ಮಂಗಳೂರು: ಮೀನುಗಾರಿಕೆ ನಿಷೇಧ ಅವಧಿ ಮುಗಿದ ಮೂರನೇ ದಿನವಾದ ಸೋಮವಾರ ಮೀನುಗಾರಿಕ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ಮಂಗಳೂರಿನ ಹಳೆ ಬಂದರಿನ ದಕ್ಕೆಯಿಂದ ಸುಮಾರು ನೂರರಷ್ಟು ಟ್ರಾಲ್ ಬೋಟ್ ಗಳು ಹೊಸ ನಿರೀಕ್ಷೆಯೊಂದಿಗೆ ಮೀನುಗಾರಿಕೆ ನಡೆಸುವ ನಿಟ್ಟಿನಲ್ಲಿ ಆಳ ಸಮುದ್ರದತ್ತ ತೆರಳಿವೆ.

ವಿಪರೀತ ಗಾಳಿಯಿಂದಾಗಿ, ಕಡಲು ಪ್ರಕ್ಷುಬ್ಧವಾಗಿದ್ದ ಕಾರಣ ಕಳೆದೆರಡು ದಿನಗಳಿಂದ ಬೋಟ್‌ಗಳು ಮೀನುಗಾರಿಕೆ ತೆರಳದೆ ದಕ್ಕೆಯಲ್ಲಿಯೇ ಬಾಕಿಯಾಗಿತ್ತು. ಡೀಸೆಲ್, ಮಂಜುಗಡ್ಡೆ ತುಂಬಿಸಿಕೊಂಡು ಸಿದ್ಧವಾಗಿದ್ದರೂ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದೀಗ ಹವಾಮಾನ ತುಸು ಅನುಕೂಲಕರ ಆಗಿ ಬದಲಾಗುತ್ತಿರುವುದರಿಂದ ಬೋಟ್‌ಗಳು ಅಳಿವೆ ಬಾಗಿಲಿನ ಮೂಲಕ ಒಂದೊಂದಾಗಿ ಸಮುದ್ರಕ್ಕಿಳಿದಿವೆ.

ಈ ಬಾರಿಯ ಋತು ಉತ್ತಮವಾಗಿರಲಿ ಎನ್ನುವ ನಿರೀಕ್ಷೆಯೊಂದಿಗೆ ತೆರಳಿರುವ ಬೋಟ್‌ಗಳು ದಕ್ಕೆಗೆ ವಾಪಾಸಾಗಲು ಹತ್ತು ದಿನಗಳು ಬೇಕಾಗಬಹುದು. ಸಮುದ್ರದಲ್ಲಿ ಮತ್ಸé ಸಂಪತ್ತು ಯಾವ ರೀತಿ ಇದೆ ಎನ್ನುವುದನ್ನು ಆಧರಿಸಿ, ಇತರ ಬೋಟ್ ಕೂಡಾ ಸಮುದ್ರಕ್ಕೆ ಇಳಿಯಲಿವೆ ಎಂದು ಮೀನುಗಾರರು ತಿಳಿಸಿದ್ದಾರೆ.

ಮಲ್ಪೆ: ಸರಕಾರದ ಆದೇಶದಂತೆ ಆ. 1ರಿಂದ ಯಾಂತ್ರಿಕ ಮೀನುಗಾರಿಕೆಗೆ ನಿಷೇಧ ತೆರವಾದರೂ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಮಲ್ಪೆ ಬಂದರಿನಲ್ಲಿ ಯಾವುದೇ ವರ್ಗದ ಬೋಟುಗಳು ಕಡಲಿಗಿಳಿದಿಲ್ಲ. ಗಾಳಿಯಿಂದಾಗಿ ಆಳಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿರುವುದರಿಂದ ಬಲೆ ಹಾಕಲು ಸಾಧ್ಯವಾಗದು ಎನ್ನಲಾಗುತ್ತದೆ.


Spread the love

Exit mobile version