Home Mangalorean News Kannada News ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ

ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ

Spread the love

ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ
ಉಡುಪಿ: ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಮಣಿಪಾಲದ ಆಸರೆ ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದರು.

ಕೇಂದ್ರದಲ್ಲಿರುವ ವಿಶೇಷ ಚೇತನರ ಜೊತೆಗೆ ಸಮಯವನ್ನು ಕಳೆದು, ಅವರೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಈ ವೇಳೆ ಅರ್ಚನಾ ಟ್ರಸ್ಟಿನ ಅಧ್ಯಕ್ಷ ಜೈ ವಿಠ್ಠಲ್, ಹಿರಿಯ ವಿಶೇಷ ತರಬೇತುದಾರ ರಮೇಶ್ ನಾಯ್ಕ್, ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ನವೀನ್ಚಂದ್ರ, ಅಮೋಘ್, ಜಯಮೋಲ್, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀವತ್ಸ ಡಿ.ಗಾಂವ್ಕರ್, ಶಮಂತ್, ಎನ್‌ಎಸ್‌ಎಸ್ ಕಾರ್ಯದರ್ಶಿ ಅಂಕಿತಾ, ಸಂದೇಶ್, ಸಮೀರ್ ಉಪಸ್ಥಿತರಿದ್ದರು.


Spread the love

Exit mobile version