ಇಂದಿರಾ ಕ್ಯಾಂಟಿನ್‌ ಗೆ ಅನ್ನಪೂರ್ಣೇಶ್ವರಿ ಹೆಸರಿಡುವ ಸಿಟಿ ರವಿ ಹೇಳಿಕೆಗೆ ಕ್ಯಾ. ಕಾರ್ಣಿಕ್‌ ಬೆಂಬಲ

Spread the love

ಇಂದಿರಾ ಕ್ಯಾಂಟಿನ್‌ ಗೆ ಅನ್ನಪೂರ್ಣೇಶ್ವರಿ ಹೆಸರಿಡುವ ಸಿಟಿ ರವಿ ಹೇಳಿಕೆಗೆ ಕ್ಯಾ. ಕಾರ್ಣಿಕ್‌ ಬೆಂಬಲ

ಮಂಗಳೂರು: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದಂತೆ ಸರಕಾರದ ವೆಚ್ಚದಲ್ಲಿ ಬಡವರಿಗಾಗಿ ಪ್ರಾರಂಭಿಸಿದ ಅನ್ನದಾಸೋಹದ ಯೋಜನೆಯನ್ನು ನಾಡಿನ ಜನತೆ ನಂಬಿರುವ ಅನ್ನದಾತೆಯಾದ ತಾಯಿ ಅನ್ನಪೂರ್ಣೇಶ್ವರಿಯ ಹೆಸರಿನಲ್ಲಿ ಮುಂದುವರಿಸಲು ಕರ್ನಾಟಕದ ಮಾಜಿ ಮಂತ್ರಿಗಳೂ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ ಟಿ ರವಿ ಅವರು ಹೇಳಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಬಿಜೆಪಿ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ

ಯಾವ ಹೆಸರಿನ ಹಿಂದೆ ತುರ್ತುಪರಿಸ್ಥಿತಿಯ ಕರಾಳ ದಿನಗಳು, ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹರಣ, ಬಲತ್ಕಾರದ ನಸ್‍ಬಂಧಿ ಕಾರ್ಯಕ್ರಮ, ರಾಷ್ಟ್ರೀಯ ನಾಯಕರು ಸೇರಿದಂತೆ ಲಕ್ಷಾಂತರ ನಿರಪರಾಧಿಗಳನ್ನು ಬಂಧಿಸಿ ವಿನಾಕಾರಣ ನಡೆಸಿದ ದೌರ್ಜನ್ಯ ಹಾಗೂ ಗರೀಬಿ ಹಟಾವೊ ಘೋಷಣೆಗಳನ್ನು ಕೇವಲ ಕಂಠ ಘೋಷಣೆಯಾಗಿಸಿ, ಭ್ರಷ್ಟಾಚಾರ ಮತ್ತು ಲೂಟಿ ಸಂಸ್ಕøತಿಯಿಂದ ನಾಡಿನ ಜನತೆಯನ್ನು ಬಡತನದ ಕೂಪಕ್ಕೆ ತಳ್ಳಿರುವ ಸರ್ವಾಧಿಕಾರಿ ಪ್ರವೃತ್ತಿಯ ನಾಯಕಿಂiÀi ಹೆಸರಿನಲ್ಲಿ ಬಡವರಿಗಾಗಿರುವ ಯೋಜನೆಗಳನ್ನು ನಡೆಸುವುದು ಎಷ್ಟು ಸರಿ..? ನಾವೇಲ್ಲ ಅಲೋಚಿಸಬೇಕಾದ ವಿಷಯ.

ರಾμÁ್ಟ್ರದ್ಯಂತ ಒಂದು ಕುಟುಂಬದ ಸದಸ್ಯರುಗಳ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಸರಕಾರಿ ಯೋಜನೆಗಳು, ವಿಶ್ವವಿದ್ಯಾನಿಲಯಗಳು, ಕ್ರೀಡಾಂಗಣಗಳು, ವಿವಿಧ ಪ್ರಶಸ್ತಿಗಳು, ಶೈಕ್ಷಣಿಕ-ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಸುಮಾರು 600 ಕ್ಕೂ ಹೆಚ್ಚಿದ್ದು ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನಕ್ಕೆ ಮತ್ತು ಗುಲಾಮಿ ಮನಸ್ಥಿತಿಗೆ ಸಾಕ್ಷಿಯಾಗಿದೆ.

ಇಂದಿನ ಕಾಂಗ್ರೆಸ್ ಇಂದಿರಾಗಾಂಧಿಯವರ ಕರಿನೆರಳಿನ ಕಾಂಗ್ರೆಸೇ ಹೊರತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಅಲ್ಲ. ಮಹಾತ್ಮ ಗಾಂಧಿಯವರು ಬಹಳ ಗಂಭೀರವಾಗಿ ಆಲೋಚಿಸಿ ಮುಂಬರುವ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದ ಲಾಭವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಬಹುದು ಎಂಬುದನ್ನು ಅರಿತೇ ಕಾಂಗ್ರೆಸ್ಸನ್ನು ವಿಸರ್ಜಿಸುವ ಸಲಹೆ ನೀಡಿರುವುದು ಇಂದಿನ ಕಾಂಗ್ರೆಸ್ಸಿಗರು ಮರೆತಂತಿದೆ.

ಇತ್ತೀಚಿನ ದಿನಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಗಳನ್ನು ‘ನೀಚ’ ಎಂದು ಕರೆದಿರುವ ಮಣಿಶಂಕರ್ ಅಯ್ಯರ್, ‘ನರಹಂತಕ’ ಎಂದು ಕರೆದಿರುವ ಸಿದ್ಧರಾಮಯ್ಯ ಮತ್ತು ಅದೇ ರೀತಿಯಲ್ಲಿ ಇತರ ಮುಖಂಡರುಗಳನ್ನು ‘ಕಾಡು ಮನುಷ್ಯರು’, ‘ಬೆನ್ನೆಲುಬಿಲ್ಲದ ನಾಯಕರು’ ಎಂದೆಲ್ಲ ಕರೆಯುತ್ತಿರುವ ಕಾಂಗ್ರೆಸ್ ಪಕ್ಷದ ಇಂದಿನ ನಾಯಕರುಗಳಿಂದ ಸಂಸ್ಕಾರದ ಹಾಗೂ ಸಂಸ್ಕೃತಿಯ ಕುರಿತ ಪಾಠ ಕಲಿಯುವ ಅವಶ್ಯಕತೆ ಭಾರತೀಯ ಜನತಾ ಪಾರ್ಟಿಗಿಲ್ಲ.

ನಾಡಿನಾದ್ಯಂತ ನಾಲ್ಕು ಬಾರಿ ಸಂಚರಿಸಿ ಶೃಂಗೇರಿಯೂ ಸೇರಿದಂತೆ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಅಭಿವೃದ್ಧಿಗೆ ತಮ್ಮ ಅನುಪಮ ಸೇವೆಸಲ್ಲಿಸಿದ ಯತಿ ಶ್ರೇಷ್ಠರಾದ ಶ್ರೀ ಶಂಕರಾಚಾರ್ಯರ ಹೆಸರನ್ನು ಶೃಂಗೇರಿಯ ಸಂಸ್ಕೃತ ಮಹಾವಿದ್ಯಾಲಯಕ್ಕೆ ಇಡಬೇಕು ಎನ್ನುವ ಸಾರ್ವಜನಿಕ ಬೇಡಿಕೆಯೂ ಅತ್ಯಂತ ಸಮಂಜಸವಾಗಿದೆ.

ಅದೇ ರೀತಿಯಲ್ಲಿ ದೇಶದ ಸೇನೆಯ ಮೊದಲ ದಂಡನಾಯಕ, ಅಪ್ರತಿಮ ಸೇನಾನಿ ಮತ್ತು ಕನ್ನಡ ನಾಡಿನ ಹೆಮ್ಮೆಯ ಪುತ್ರ ಕೊಡಗಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪರವರ ಹೆಸರನ್ನು ನಾಡಿನ ಅಭಯಾರಣ್ಯಕ್ಕೆ ಸಾರ್ವಜನಿಕರ ಅಪೇಕ್ಷೆಯಂತೆ ಇಡಲು ಉದ್ದೇಶಿಸಿದ್ದಲ್ಲಿ ತಪ್ಪೇನಿದೆ…?

ಈ ಬಾರಿಯ ಟೋಕಿಯೋ ಒಲಿಂಪಿಕ್‍ನ ಸಂದರ್ಭದಲ್ಲಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಕೇಲ್ ರತ್ನವನ್ನು 1928, 1932, 1936 ರ ಒಟ್ಟು ಮೂರು ಒಲಿಂಪಿಕ್‍ನಲ್ಲಿ ನಡೆದ ಹಾಕಿ ಪಂದ್ಯಾಟದಲ್ಲಿ ಒಲಿಂಪಿಕ್ ಚಿನ್ನದ ಪದಕ ಗಳಿಸಿಕೊಟ್ಟ ದೇಶದ ಕಣ್ಮಣಿ ಹಾಗೂ ಕ್ರೀಡಾಪಟುಗಳಿಗೆ ಸ್ಪೂರ್ತಿನೀಡುವ ಮೇಜರ್ ಧ್ಯಾನಚಂದ್ ಅವರ ಹೆಸರಿನಲ್ಲಿ ಘೋಷಣೆ ಮಾಡಿರುವುದನ್ನು ನಾಡಿನ ಜನತೆ ಅತ್ಯಂತ ಸಂಭ್ರಮದಿಂದ ಸ್ವಾಗತಿಸಿರುವುದನ್ನು ಕಂಡಾಗ ಜನತೆಯ ಚಿತ್ತ ಎತ್ತ…? ಎನ್ನುವ ಸತ್ಯದ ಅರಿವು ಗುಲಾಮಿ ಮನಸ್ಥಿತಿಯವರಾದ ಕಾಂಗ್ರೆಸನ್ನು ಎಚ್ಚರಿಸೀತು ಎನ್ನುವ ಆಶಾಭಾವನೆಯನ್ನು ಈ ನಾಡಿನ ಜನತೆ ಹೊಂದಿರುವುದ ಇಂದಿನ ವಾಸ್ತವ.

ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ   ಸಿ ಟಿ ರವಿ ಅವರ ಹೇಳಿಕೆ ಅತ್ಯಂತ ಪ್ರಸ್ತುತವಾಗಿದ್ದು ಈ ನಾಡಿನ ಜನತೆ ಬಯಸುವ ಬದಲಾವಣೆಯ ಸಂಕೇತವಾಗಿದೆ. ಮಾತೃಭೂಮಿ ಎಂದು ನಾವು ಗೌರವಿಸುವ ಈ ಭಾರತ ಯಾವುದೋ ಒಂದು ಕುಟುಂಬದ ಆಸ್ತಿಯಲ್ಲ. ನಿಮ್ಮ ರಾಜಕೀಯ ಸ್ವೇಚ್ಛಾಚಾರಕ್ಕಾಗಿ, ತಾಯಿ ಭಾರತಿಯನ್ನು ಗೌರವಿಸುವ ಮತ್ತು ತಾಯಿ ಭಾರತಿಯ ಹಿರಿಮೆ ಗರಿಮೆಗಾಗಿ ತಮ್ಮನ್ನು ಸಮರ್ಪಿಸಿದ ನಾಡಿನ ಗಣ್ಯ ಮಹನೀಯರುಗಳನ್ನು ಪುರಸ್ಕರಿಸಿ ಗೌರವಿಸಿದ ಕಾಂಗ್ರೆಸ್, ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಮಾಡಿದ ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೆ ತನ್ನ ಸ್ವಂತ ಲಾಭಕ್ಕಾಗಿ ಮತ್ತು ಸ್ವಾರ್ಥದ ರಾಜಕಾರಣಕ್ಕಾಗಿ ಒಂದು ಕುಟುಂಬವನ್ನು ಅವಲಂಬಿಸಿ, ಪೆÇೀಷಿಸಿ, ಬೆಳೆಸುವ ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಮತ್ತು ಗುಲಾಮಿ ಮಾನಸಿಕತೆಯನ್ನು ತೀವ್ರವಾಗಿ ಖಂಡಿಸುತ್ತಾ, ಅದೇ ಮನಸಿಕತೆಯೊಂದಿಗೆ ಒಂದು ಕುಟುಂಬವನ್ನು ಓಲೈಸುವ ಕರ್ನಾಟಕ ರಾಜ್ಯದ ಕಾಂಗ್ರೆಸಿನ ದಾಸ್ಯ ಮನೋಭಾವವನ್ನು ಭಾರತೀಯ ಜನತಾ ಪಾರ್ಟಿಯು ತ್ರೀವ್ರವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

1 Comment

  1. INDIRA canteen is nothing but Annapurneshwari no need to change. seems to be political game or misuse of chair only. .

Comments are closed.