ಉಡುಪಿಯಲ್ಲಿ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರಿಗೆ ಕ್ವಾರಂಟೈನ್ ಅ್ಯಪ್ ಮೂಲಕ ಕಣ್ಗಾವಲು ಇಡುತ್ತಿರುವ ಜಿಲ್ಲಾಡಳಿತ
ಉಡುಪಿ: ರಾಜ್ಯ ಸರಕಾರದ ಹೊಸ ನಿಯಮಾವಳಿಯಂತೆ ಹೊರ ರಾಜ್ಯ, ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿ ಇರುವವರ ಮೇಲೆ ಉಡುಪಿ ಜಿಲ್ಲಾಡಳಿತ ಆ್ಯಪ್ ಮೂಲಕ ಹದ್ದಿನ ಕಣ್ಣಿಟ್ಟಿದೆ.
ಒಂದು ಕಡೆಯಿಂದ ಜಿಲ್ಲೆಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇರುವವರಲ್ಲಿ ದಿನೇ ದಿನೇ ಕೋರೋನಾ ಪಾಸಿಟಿವ್ ಕೇಸುಗಳು ಹೆಚ್ಚುತ್ತಿದ್ದು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯ ಓಡಾಟ ಮಾಡುವವರಿಗಾಗಿ ಉಡುಪಿ ಜಿಲ್ಲಾಡಳಿತ ತಂತ್ರಜ್ಞಾನದ ಮೊರೆ ಹೊಕ್ಕಿದೆ.
ಉಡುಪಿ ಜಿಲ್ಲೆಯಲ್ಲಿ ಮೇ 27 ತನಕ ದುಬೈ, ಮಹಾರಾಷ್ಟ್ರ, ತೆಲಂಗಾಣ, ಕೇರಳದಿಂದ ಜಿಲ್ಲೆಗೆ ಸುಮಾರು 8168 ಮಂದಿ ಬಂದು ಕ್ವಾರಂಟೈನ್ ಆಗಿದ್ದು ಅವರು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯ ಓಡಾಟ ಮಾಡುವವರಿಗಾಗಿ ಜಿಲ್ಲಾಡಳಿತ ಕ್ವಾರಂಟೈನ್ ಆ್ಯಪ್ ಮೂಲಕ ಜಿಯೋ ಫೆನ್ಸಿಂಗ್ ವ್ಯವಸ್ಥೆ ಜಾರಿ ಮಾಡಿದೆ,
ಈ ಅ್ಯಪ್ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಅನಗತ್ಯ ಓಡಾಟ ಮಾಡಿದರೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನೆಯಾಗುತ್ತದೆ. ಕೂಡಲೇ ಆರೋಗ್ಯ ಸಿಬಂದಿಗಳು ಅಂತಹ ವ್ಯಕ್ತಿಗೆ ಪ್ರಥಮ ಬಾರಿ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿ ಎಲ್ಲಿಯಾದರೂ ನಿಯಮ ಉಲ್ಲಂಘಟನೆ ನಡೆಸಿದರೆ ಅಂತಹವರ ವಿರುದ್ದ ಜಿಲ್ಲಾಡಳಿತ ಪ್ರಕರಣ ದಾಖಲು ಮಾಡುತ್ತದೆ.
ಒಂದು ವೇಳೆ ಕ್ವಾರಂಟೈನ್ ಅಲ್ಲಿ ಇರುವ ವ್ಯಕ್ತಿಯಲ್ಲಿ ಸ್ಮಾರ್ಟ್ ಫೋನ್ ಇಲ್ಲವಾದರೆ ಅಂತಹ ವ್ಯಕ್ತಿ ಪ್ರತಿ ನಿತ್ಯ ಗ್ರಾಮ ಪಂಚಾಯತಿನ ವಿ ಎ, ಪಿಡಿಒ ಜೊತೆಗೆ ನಿಂತು ಸೆಲ್ಫೀ ತೆಗೆದು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಸ್ಮಾರ್ಟ್ ಫೋನ್ ಇಲ್ಲದೆ ಆ್ಯಪ್ ಹಾಕಿಕೊಳ್ಳಲು ಸಾಧ್ಯವಿಲ್ಲದ ಮನೆಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಮೂಲಕ ನಿಗಾ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.