Home Mangalorean News Kannada News ಉಡುಪಿ: ಜಿಪಂ, ತಾಪಂ ಚುನಾವಣೆ; ಜಿಲ್ಲೆಯಲ್ಲಿ ಅರಳಿದ ಕಮಲ; ಮುದುಡಿಕೊಂಡ ಕಾಂಗ್ರೆಸ್

ಉಡುಪಿ: ಜಿಪಂ, ತಾಪಂ ಚುನಾವಣೆ; ಜಿಲ್ಲೆಯಲ್ಲಿ ಅರಳಿದ ಕಮಲ; ಮುದುಡಿಕೊಂಡ ಕಾಂಗ್ರೆಸ್

Spread the love

ಉಡುಪಿ:  ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮುದುಡಿ ಹೋಗಿದ್ದು, ಬಿಜೆಪಿ ಪಕ್ಷ ಮೇಲುಗೈ ಸಾಧಿಸಿದೆ.

ಜಿಲ್ಲಾ ಪಂಚಾಯತಿನ 26 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳನ್ನು ತನ್ನದಾಗಿಸಿ, ಕಾಂಗ್ರೆಸ್ ಕೇವಲ 6 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ.

feb23-2016-zptp-countingudpi-009

ತಾಲೂಕು ಪಂಚಾಯತಿನ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಸಂಪೂರ್ಣ ನೆಲಕ್ಕಚ್ಚಿದ್ದು, 20 ಸದಸ್ಯ ಬಲ ಹೊಂದಿರುವ ಕಾರ್ಕಳ ತಾಲೂಕು ಪಂಚಾಯತಿಯಲ್ಲಿ 19 ಬಿಜೆಪಿ ಗೆದ್ದರೆ ಕೇವಲ ಒಂದು ಸ್ಥಾನವನ್ನು ಕಾಂಗ್ರೆಸ್ ಪಡೆದುಕೊಂಡಿದೆ. 37 ಸದಸ್ಯ ಬಲ ಹೊಂದಿರುವ ಕುಂದಾಪುರ ತಾಲೂಕು ಪಂಚಾಯತಿಯಲ್ಲಿ ಬಿಜೆಪಿ 27 ಸ್ಥಾನ ಪಡೆದಿದ್ದು, 10 ಸ್ಥಾನ ಕಾಂಗ್ರೆಸ್ ಗೆದ್ದುಕೊಂಡಿದೆ. ಉಡುಪಿ ತಾಲೂಕು ಪಂಚಾಯತಿಯಲ್ಲಿ ಬಿಜೆಪಿ 27 ಸ್ಥಾನ ಪಡೆದರೆ ಕಾಂಗ್ರೆಸ್ 14 ಸ್ಥಾನ ಪಡೆದಿದೆ.

ಜಿಲ್ಲಾ ಪಂಚಾಯತಿಯಲ್ಲಿ ಗೆದ್ದ ಅಭ್ಯರ್ಥಿಗಳ ವಿವರ :   ಶಿರೂರು – ಬಟ್ವಾಡಿ ಸುರೇಶ್ (ಬಿಜೆಪಿ), ಬೈಂದೂರು – ಶಂಕರ್ ಪೂಜಾರಿ (ಬಿಜೆಪಿ), ಕಂಬದಕೋಣೆ – ಗೌರಿದೇವಾಡಿಗ (ಕಾಂಗ್ರೆಸ್), ತ್ರಾಸಿ – ಶೋಭಾ ಜಿ ಪುತ್ರನ್ (ಬಿಜೆಪಿ), ವಂಡ್ಸೆ – ಬಾಬು ಶೆಟ್ಟಿ (ಬಿಜೆಪಿ), ಕಾವ್ರಾಡಿ – ಜೋತಿ (ಕಾಂಗ್ರೆಸ್), ಕೋಟೇಶ್ವರ – ಲಕ್ಷ್ಮೀ ಮಂಜು ಬಿಲ್ಲವ (ಬಿಜೆಪಿ), ಬೀಜಾಡಿ – ಶ್ರೀಲತಾ ಸುರೇಶ್ ಶೆಟ್ಟಿ (ಬಿಜೆಪಿ), ಸಿದ್ಧಾಪುರ – ಹಾಲಾಡಿ ತಾರಾನಾಥ್ ಶೆಟ್ಟಿ (ಬಿಜೆಪಿ), ಹಾಲಾಡಿ – ಸುಪ್ರೀತಾ ಉದಯ್ ಕುಮಾರ್ (ಬಿಜೆಪಿ), ಕೋಟ – ರಾಘವೇಂದ್ರ ಕಾಂಚನ್  (ಬಿಜೆಪಿ), ಮಂದಾರ್ತಿ – ಪ್ರತಾಪ್ ಹೆಗ್ಡೆ (ಬಿಜೆಪಿ), ಬ್ರಹ್ಮಾವರ – ಶೀಲಾ ಕೆ ಶೆಟ್ಟಿ (ಬಿಜೆಪಿ), ಕಲ್ಯಾಣಪುರ – ಜನಾರ್ಧನ್ ತೋನ್ಸೆ (ಕಾಂಗ್ರೆಸ್), ಉದ್ಯಾವರ – ದಿನಕರ (ಬಿಜೆಪಿ), ಹಿರಿಯಡ್ಕ – ಚಂದ್ರಿಕಾ ರಂಜನ್ ಕೇಲ್ಕರ್ (ಕಾಂಗ್ರೆಸ್), ಕುರ್ಕಾಲು – ಗೀತಾಂಜಲಿ ಸುವರ್ಣ (ಬಿಜೆಪಿ), ಶಿರ್ವ – ವಿಲ್ಸನ್ ರೊಡ್ರಿಗಸ್ (ಕಾಂಗ್ರೆಸ್), ಎಲ್ಲೂರು – ಶಿಲ್ಪಾ ಜಿ ಸುವರ್ಣ (ಬಿಜೆಪಿ), ಪಡುಬಿದ್ರಿ – ಶಶಿಕಾಂತ್ (ಬಿಜೆಪಿ), ಹೆಬ್ರಿ – ಜ್ಯೋತಿ ಹರೀಶ್ (ಬಿಜೆಪಿ), ಬೆಳ್ಮಣ್ – ರೇಶ್ಮಾ ಉದಯ್ ಶೆಟ್ಟಿ (ಬಿಜೆಪಿ), ಬೈಲೂರು – ಸುಮಿತ್ ಶೆಟ್ಟಿ (ಬಿಜೆಪಿ), ಮಿಯಾರು – ದಿವ್ಯಾಶ್ರೀ (ಬಿಜೆಪಿ), ಬಜಗೋಳಿ – ಉದಯ್ ಎಸ್ ಕೋಟ್ಯಾನ್ (ಬಿಜೆಪಿ).


Spread the love

Exit mobile version