Home Mangalorean News Kannada News ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Spread the love

ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಸ್ತುತ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಮಾಹಿತಿ ಈ ಕೆಳಗಿನಂತಿದೆ.

ಪ್ರೌಢ ಶಾಲಾ ವಿಭಾಗದಲ್ಲಿ ಜನತಾ ಪ್ರೌಢಶಾಲೆ ಹೆಮ್ಮಾಡಿಯ ಬಿ.ಮೋಹನ ದಾಸ್ ಶೆಟ್ಟಿ, ರೆಂಜಾಳದ ವಿನಾಯಕ ನಾಯ್ಕ, ರಾಜೀವ ನಗರದ ಸಂಜೀವ ಎಚ್ ನಾಯಕ್, ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರುನ ಉದಯ್ ಕುಮಾರ್, ವಿವೇಕ ಪ.ಪೂ. ಕಾಲೇಜಿನ ಪ್ರೇಮಾನಂದರವರು ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆಯ ಮುಖ್ಯ ಶಿಕ್ಷಕ ಸೇಸು, ಎಲಿಯಾಳ ಕಾರ್ಕಳದ ಸಹಶಿಕ್ಷಕ ಸತೀಶ್ ರಾವ್.ಕೆ, ಕೊರವಡಿ ಕುಂದಾಪುರದ ಸಹ ಶಿಕ್ಷಕಿ ವಿಶಾಲಕ್ಷಿö, ಪಡುಅಲೆವೂರಿನ ಮುಖ್ಯ ಶಿಕ್ಷಕ ಕೃಷ್ಣಪ್ಪ, ಕೆರಾಡಿ ಬೈಂದೂರಿನ ಸಹ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ, ಮುದ್ರಾಡಿ ಹೆಬ್ರಿಯ ಸಹ ಶಿಕ್ಷಕ ಶ್ರೀನಿವಾಸ ಭಂಡಾರಿ, ಸೆಳ್ಕೋಡು ಬೈಂದೂರಿನ ಸಹ ಶಿಕ್ಷಕ ಭಾಸ್ಕರ್ ನಾಯ್ಕ, ಕಲ್ಯಾಣಪುರ ಬ್ರಹ್ಮಾವರದ ಸಹ ಶಿಕ್ಷಕ ಅರವಿಂದ ಹೆಬ್ಬಾರ್, ಹೆಜಮಾಡಿ ಉಡುಪಿಯ ಸಹ ಶಿಕ್ಷಕಿ ಸುನೀತಾ ಶೆಟ್ಟಿ, ಸೂರ್ಕುಂದ ಬೈಂದೂರಿನ ಸಹ ಶಿಕ್ಷಕ ಪ್ರಾನ್ಸಿಸ್ ವಿ.ಟಿ, ಪಡುವಾಲ್ತೂರು ಕುಂದಾಪುರದ ಸಹ ಶಿಕ್ಷಕ ಎಚ್.ಪ್ರಭಾಕರ್ ಶೆಟ್ಟಿ, ಪರಪ್ಪಾಡಿ ನಲ್ಲೂರಿನ ಸಹ ಶಿಕ್ಷಕಿ ಪೂರ್ಣಿಮಾ ಶೆಣೈ, ಯಳೂರುತೊಪ್ಲು ಬೈಂದೂರಿನ ಸಹ ಶಿಕ್ಷಕ ಶಶಿಧರ ಶೆಟ್ಟಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಳಾಖೇ ಪ್ರಕಟಣೆ ತಿಳಿಸಿದೆ.


Spread the love

Exit mobile version